ಸರಿಯಾದ ಟೈಂಗೆ ಬಸ್ ಇಲ್ಲ ಎಂದ ವಿದ್ಯಾರ್ಥಿಗೆ ಬಿತ್ತು ಗೂಸಾ

ಹುಬ್ಬಳ್ಳಿ, ಬುಧವಾರ, 27 ಸೆಪ್ಟಂಬರ್ 2017 (19:59 IST)

Widgets Magazine

ಹುಬ್ಬಳ್ಳಿ: ಬಸ್ ಸರಿಯಾದ ಸಮಯಕ್ಕೆ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಸಾರಿಗೆ ಇಲಾಖೆ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ ಘಟನೆ ಭಾರತ್ ಮಿಲ್ ಸರ್ಕಲ್ ಬಳಿ ನಡೆದಿದೆ.


ರಾಜ್ಯ ಸಾರಿಗೆ ಬಸ್ ಪಾಸ್ ಕೊಟ್ಟು, ಸರಿಯಾದ ಸಮಯಕ್ಕೆ ಬಸ್ ಬಿಡುತಿಲ್ಲ ಎಂದು ವಿದ್ಯಾರ್ಥಿ ಇಲಾಖೆಯ ನಿಯಂತ್ರಕನನ್ನು ಕೇಳಿದ್ದಾನೆ. ಇದರಿಂ‌ದ ಸಿಟ್ಟಾದ ಸಾರಿಗೆ ಬಸ್ ನಿಯಂತ್ರಕ, ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದಾನೆ‌.

ವಿದ್ಯಾರ್ಥಿ ಹುಬ್ಬಳ್ಳಿಯಿದ ಮಿಶ್ರಿಕೋಟಿಗೆ ಹೋಗಬೇಕಿತ್ತು. ಆದರೆ ಒಂದು ಗಂಟೆವರೆಗೂ ಬಸ್ ಇಲ್ಲಗದೆ ವಿದ್ಯಾರ್ಥಿ ಬಸ್ ಗಾಗಿ ಪರಿತಪಿಸಿದ್ದಾನೆ. ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿ,  ಗಿರಣಿ ಚಾಳದ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತಾತ್ಕಾಲಿಕ ಬಸ್ ತಂಗುದಾಣದಲ್ಲಿನ ನಿಯಂತ್ರಣಾ ಸಿಬ್ಬಂದಿಯನ್ನು ಕೇಳಿದ್ದಾನೆ. ಆದರೆ ಇದಕ್ಕೆ ಸರಿಯಾಗಿ ಸ್ಪಂದಿಸದ ಸಾರಿಗೆ ಬಸ್ ನಿಯಂತ್ರಕ, ಬಸ್ ಪಾಸ್ ನೀಡಿದರೆ ಸರಿಯಾದ ವೇಳೆಗೆ ಬಸ್ ಬಿಡಬೇಕು ಎಂಬ ನಿಯಮ ಎಲ್ಲಿದೆ ಎಂದು ವಿದ್ಯಾರ್ಥಿಗೆ ಪ್ರಶ್ನಿಸಿದ್ದಾನೆ. ಬಳಿಕ ನಿಯಂತ್ರಕ ಹಾಗೂ ಇನ್ನೊಬ್ಬ ಸಿಬ್ಬಂದಿ ಸೇರಿ ವಿದ್ಯಾರ್ಥಿಗೆ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ. ಇದೇವೇಳೆ ಸ್ಥಳೀಯರು ಜಗಳ ಬಿಡಿಸಿ ವಿದ್ಯಾರ್ಥಿಗೆ ಸಮಾಧಾನ ಮಾಡಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಅಟೋ ಚಾಲಕನ ಬಂಧನ

ಬೆಂಗಳೂರು: .ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಟೋರಿಕ್ಷಾ ಚಾಲಕನನ್ನು ...

news

ವರುಣ್ ಗಾಂಧಿಯಲ್ಲಿ ನೆಹರು ಸಿದ್ಧಾಂತಗಳಿವೆ, ಬಿಜೆಪಿಗೆ ಅನರ್ಹ: ದಿಗ್ವಿಜಯ್ ಸಿಂಗ್

ನವದೆಹಲಿ: ರೋಹಿಂಗ್ಯ ಮುಸ್ಲಿಮರ ಬಗ್ಗೆ ನಿಲುವು ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಸಂಸದ ವರುಣ್ ಗಾಂಧಿಯನ್ನು ...

news

ವಿಧಾನಪರಿಷತ್ ಸದಸ್ಯರೊಂದಿಗೆ ಸಿಎಂ ಸಭೆ

ಬೆಂಗಳೂರು: ಸಮಸ್ಯೆಗಳ ಬೇಡಿಕೆ ಈಡೇರಿಕೆ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿಧಾನಪರಿಷತ್ ಸದಸ್ಯರೊಂದಿಗೆ ಸಭೆ ...

news

17ರ ಬಾಲಕನ ಮೇಲೆ 29 ವರ್ಷದ ಅಂಟಿಯಿಂದ ನಿರಂತರ ರೇಪ್

ಮಾಪುಸಾ(ಗೋವಾ): ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯ ವಿರುದ್ಧ ದೂರು ...

Widgets Magazine