ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ?

ತುಮಕೂರು, ಶನಿವಾರ, 24 ಮಾರ್ಚ್ 2018 (19:18 IST)

 ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಮತ್ತು  ಜೆಡಿಎಸ್ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಆಗಿದ್ದು 1೦ ಕೋಟಿ ಡೀಲ್‌ ನಡೆದಿದೆಯೆನ್ನುವ ಶಾಸಕ ಸುರೇಶ್ ಗೌಡ ಆರೋಪಕ್ಕೆ ಜಿಲ್ಲಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಶಾಸಕ ಸುರೇಶ್ ಗೌಡ ವಿರುದ್ದ ಹರಿಹಾಯ್ದ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ, ಕೂಡಲೇ ಹೇಳಿಕೆ ವಾಪಾಸ್ಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
 
ವೀಕ್ ಕ್ಯಾಂಡೇಟ್ ಹಾಕಲು ತುಮಕೂರು ಸಂಸದ ಮುದ್ದಹನುಮೇಗೌಡ ಹಾಗೂ ಜಿ. ಪರಮೇಶ್ವರ್, ಮಾಜಿ ಸಚಿವ ಜೆಡಿಎಸ್‌ನ  ಚೆನ್ನಿಗಪ್ಪ ಅವರಿಂದ 10 ಕೋಟಿ ಪಡೆದಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ‌ ಸುರೇಶ್ ಗೌಡ ಆರೋಪಿಸಿದ್ದರು.
 
ಇದೆಲ್ಲಾ ಸುರೇಶ್ ಗೌಡ ಅವರು ಸೋಲುವ ಭೀತಿಯಿಂದ ಮಾಡಿರುವ ಆರೋಪ. ಅದು ಬಿಜೆಪಿ ಸಂಸ್ಕೃತಿ, ನಮಗೆ ಗ್ರಾಮಾಂತರದಲ್ಲಿ ಜೆಡಿಎಸ್ ಪ್ರತಿಸ್ಪರ್ಧಿ. ಪಕ್ಷದ ಹಾಗೂ ಆರ್ ಎಸ್ ಎಸ್ ನಾಯಕರ ಬಗ್ಗೆಯೂ ಸುರೇಶ್ ಗೌಡ ಹಿಂದೆ ಮಾತನಾಡಿದ್ದರು ಎಂದು ತಿರುಗೇಟು ನೀಡಿದ್ದಾರೆ.
 
ಗುಬ್ಬಿ ಶಾಸಕ ವಾಸು ಅವರನ್ನು ಬಿಜೆಪಿ ಪಕ್ಷಕ್ಕೆ ಕರೆತರಲು ವಾಸು ಅವರಿಗೆ ಆಫರ್ ಕೊಟ್ಟಿದ್ರು. ಇಂತಹದ್ದೆಲ್ಲಾ ಸುರೇಶ್ ಗೌಡ್ರ ಚಾಳಿ, ಕಾಂಗ್ರೆಸ್ ಪಕ್ಷದ್ದಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಟಾಂಗ್ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಶಾಸಕ ವಿಧಿವಶ: ದೇವೇಗೌಡರಿಂದ ಸಂತಾಪ

ಹಾಸನ: ಬೇಲೂರಿನ ಶಾಸಕರಾದ ವೈಎನ್ ರುದ್ರೇಶ್ ಗೌಡರು ವಿಧಿವಶರಾಗಿರುವ ಸುದ್ದಿಯನ್ನು ತಿಳಿದು ಮನಸ್ಸಿಗೆ ...

news

ಬಿಜೆಪಿಯವರು ಎರಡು ತಲೆ ನಾಗರಹಾವು ಇದ್ದಂತೆ: ಸಿಎಂ ವಾಗ್ದಾಳಿ

ಚಾಮರಾಜನಗರ: ಕಳೆದ 5 ವರ್ಷದಿಂದ ಕರ್ನಾಟಕದಲ್ಲಿ ನಾವು ಆಡಳಿತ ಮಾಡಿದ್ದೇವೆ ಚಾಮರಾಜನಗರ ಜಿಲ್ಲೆಯನ್ನ ...

news

ತುಮಕೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಕಾಂಗ್ರೆಸ್‌ ತೆಕ್ಕೆಗೆ.

ತುಮಕೂರು : ಇಂದು ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸುಧೀಶ್ವರ್ ಮೇಯರ್, ಉಪಮೇಯರ್ ಆಗಿ ...

news

ಮೋದಿ ಪ್ರಚಾರಕ್ಕೆ ಹೋದ್ರೆ ಬಿಜೆಪಿ ಗೆಲ್ಲುತ್ತೆ, ರಾಹುಲ್ ಹೋದ್ರೆ ಕಾಂಗ್ರೆಸ್ ಸೋಲುತ್ತೆ: ಈಶ್ವರಪ್ಪ

ಬೆಳಗಾವಿಯಲ್ಲಿ ಭಾರತೀಯ ಜನತಾ ‌ಪಾರ್ಟಿ ಬೆಳಗಾವಿ ಮಹಾನಗರ ಜಿಲ್ಲೆ ವತಿಯಿಂದ ಆಯೋಜಿಸಿದ್ದ ಹಿಂದುಳಿದ ವರ್ಗಗಳ ...

Widgets Magazine
Widgets Magazine