ಗದಗದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಇಬ್ಬರ ಮೃತದೇಹ ಪತ್ತೆ

ಗದಗ, ಬುಧವಾರ, 12 ಏಪ್ರಿಲ್ 2017 (14:22 IST)

Widgets Magazine

ಗದಗದಲ್ಲಿ ರೀಬೋರಿಂಗ್ ವೇಳೆ ಮಣ್ಣು ಕುಸಿದು ಕೊಳವೆ ಬಾವಿಗೆ ಬಿದ್ದಿದ್ದ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮಣ್ಣಿನಡಿ ಸಿಲುಕಿದ್ದ ಜಮೀನು ಮಾಲೀಕ ಶಂಕರಪ್ಪ(30) ಮತ್ತು ಮೇಸ್ತ್ರೀ ಬಸವರಾಜು(33) ಮೃತದೇಹಗಳನ್ನ ಹೊರತೆಗೆಯಲಾಗಿದೆ. ಸುಮಾರು 3 ಗಂಟೆಗಳ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನ ಹೊರತೆಗೆದಿದ್ದಾರೆ. ರೋಣ ತಹಸೀಲ್ದಾರ್ ಶಿವಲಿಂಗ ಪ್ರಭು ವಾಲಿ ಖಚಿತಪಡಿಸಿದ್ದಾರೆ.


ಜಮೀನಿನಲ್ಲಿ ಬತ್ತಿಹೋಗಿದ್ದ ಕೊಳವೆ ಬಾವಿಯ ರೀಬೋರಿಂಗ್ ವೇಳೆ ಬೆಳಗ್ಗೆ ಈ ಅವಘಡ ಸಂಭವಿಸಿತ್ತು. ಮಣ್ಣಿನಡಿ ಸಿಲುಕಿದ್ದರಿಂದ ಉಸಿರಾಟಕ್ಕೆ ಆಸ್ಪದವೇ ಇರಲಿಲ್ಲ, ಹೀಗಾಗಿ, ಜೀವಂತವಾಗಿ ಹೊರತೆಗೆಯಲು ಸಾಧ್ಯವಾಗಲಿಲ್ಲ ಎಂದು ತಹಸೀಲ್ದಾರ್ ಹೇಳಿದ್ದಾರೆ.

ಅತ್ಯಂತ ವೇಗದ ಕಾರ್ಯಾಚರಣೆ ಇದಾಗಿದ್ದು, ಮೃತಪಟ್ಟಿರುವ ಶಂಕರಪ್ಪಗೆ ಮೂವರು ಮಕ್ಕಳಿದ್ದು, ಬಸವರಾಜುಗೆ ಇಬ್ಬರು ಮಕ್ಕಳಿದ್ದಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿವಾಹಕ್ಕೆ ವಿರೋಧ: 225 ನಿದ್ರೆಮಾತ್ರೆಗಳನ್ನು ಸೇವಿಸಿದ ಪ್ರೇಮಿಗಳು

ಚೆನ್ನೈ: ಪೋಷಕರು ವಿವಾಹಕ್ಕೆ ವಿರೋಧಿಸಿದ ಹಿನ್ನೆಲೆಯಲ್ಲಿ ಕನಿಷ್ಠ 225 ನಿದ್ರೆ ಮಾತ್ರೆಗಳನ್ನು ಸೇವಿಸಿದ ...

news

ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಬಿಜೆಪಿ ಯುವ ನಾಯಕನ ಹೇಳಿಕೆ

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಲೆ ಕಡಿದು ತಂದವರಿಗೆ 11 ಲಕ್ಷ ಬಹುಮಾನ ...

news

ಕೊಳವೆಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು: ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಕೊಳವೇ ಬಾವಿ ರೀಬೋರಿಂಗ್ ವೇಳೆ ಮಣ್ಣು ಕುಸಿದು ಇಬ್ಬರು ಕೊಳವೆ ಬಾವಿಗೆ ಬಿದ್ದಿರುವ ಘಟನೆ ಗದಗ ಜಿಲ್ಲೆಯ ರೋಣ ...

news

ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್

ನವದೆಹಲಿ: ವಿದೇಶೀ ವಿನಿಮಯ ಪ್ರಾಧಿಕಾರದ ನಿಯಮಾವಳಿ ಮುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿಯ ನ್ಯಾಯಾಲಯ ...

Widgets Magazine Widgets Magazine