ರೈಲಿಗೆ ಸಿಲುಕಿ ವಿಧಾನ ಪರಿಷತ್ ಸದಸ್ಯನ ಸಹೋದರನ ಪುತ್ರ ಆತ್ಮಹತ್ಯೆ

ಕಲಬುರ್ಗಿ, ಮಂಗಳವಾರ, 19 ಸೆಪ್ಟಂಬರ್ 2017 (20:27 IST)

Widgets Magazine

ಕಲಬುರ್ಗಿ: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.


ಪಿಡಿಎ ಎಂಜಿನಿಯರ್ ಕಾಲೇಜು ಬಳಿಯ ರೈಲ್ವೇ ಹಳಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಸಹೋದರ ಎ.ಜಿ.ಪಾಟೀಲ್ ಪುತ್ರ ಸಂಜಯ್ ಪಾಟೀಲ್(35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸಂಜಯ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಲಹ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮತ್ತೊಂದೆಡೆ ಬಿದ್ದಾಪುರ ರೈಲ್ವೇ ಗೇಟ್ ಬಳಿ ರೇವಣಸಿದ್ಧ ಪೂಜಾರಿ(35) ಎಂಬ ವ್ಯಕ್ತಿ ರೈಲಿಗೆ ತಲೆ ಕೊಟ್ಟಿದ್ದಾರೆ. ಪೈಂಟರ್ ಕೆಲಸ ಮಾಡುತ್ತಿದ್ದ ರೇವಣಸಿದ್ಧ, ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಆತ್ಮಹತ್ಯೆ ವಿಧಾನ ಪರಿಷತ್ ಬಿ.ಜಿ.ಪಾಟೀಲ್ ಸಂಜಯ್ ಪಾಟೀಲ್ Kalburgi Mlc Suicide Bg Patil Sanjay Patil

Widgets Magazine

ಸುದ್ದಿಗಳು

news

ಕೆ.ಎಸ್.ಈಶ್ವರಪ್ಪ ತಲೆಯಲ್ಲಿ ಮೆದುಳಿಲ್ಲ: ಸಿಎಂ ಸಿದ್ದರಾಮಯ್ಯ

ಕಲಬುರಗಿ: ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪಗೆ ತಲೆಯಲ್ಲಿ ಮೆದುಳಿಲ್ಲ. ಅದಕ್ಕೆ ಮನಸ್ಸಿಗೆ ...

news

ನವರಾತ್ರಿ ವೈಭವಕ್ಕೆ ಮಧುವಣಗಿತ್ತಿಯಂತೆ ಸಿದ್ಧಗೊಳ್ಳುತ್ತಿದೆ ಅರಮನೆ ನಗರಿ

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ನಾಡಹಬ್ಬಕ್ಕೆ ಖ್ಯಾತ ಕವಿ ...

news

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದಡಿ ಶಿಕ್ಷಕನ ಬಂಧನ

ಉಡುಪಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದಡಿ 58 ವರ್ಷದ ಶಿಕ್ಷಕನನ್ನು ಶಂಕರನಾರಾಯಣ್ ಠಾಣೆ ...

news

ಶೀಲ ಶಂಕಿಸಿ ಪತಿಯಿಂದಲೇ ಪತ್ನಿಯ ಹತ್ಯೆ

ಮೈಸೂರು: 32 ವರ್ಷ ವಯಸ್ಸಿನ ಪತ್ನಿ ಶಕುಂತಲಾ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿಯೊಬ್ಬ ...

Widgets Magazine