ಹಾಸನ : ಕೆಲಸ ಅರಸಿಕೊಂಡು ಹಾಸನ ನಗರಕ್ಕೆ ಬಂದಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರು ಮಲಗಿದ್ದಲ್ಲಿಯೇ ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ತಾಲೂಕಿನ ಹನುಮಂತಪುರದಲ್ಲಿ ನಡೆದಿದೆ. ಉತ್ತರಪ್ರದೇಶದ ನಯನ್ಪುರ ಗ್ರಾಮದ ರಾಮ್ ಸಂಜೀವನ್ (30) ಹಾಗೂ ನವಾಬ್ (24) ಮೃತ ದುರ್ದೈವಿಗಳು. ಇವರಿಬ್ಬರು ಕಳೆದ ಹದಿನೈದು ದಿನದ ಹಿಂದೆ ಕೆಲಸ ಕೊಡಿಸುವಂತೆ ಹಾಸನದಲ್ಲಿರುವ ತನ್ನ ಸ್ನೇಹಿತನಾದ ವಿಕ್ರಂ ಎಂಬಾತನನ್ನು ಸಂಪರ್ಕಿಸಿದ್ದರು.ಈ ವೇಳೆ ವಿಕ್ರಂ ಇಬ್ಬರಿಗೂ ಕೆಲಸ ಕೊಡಿಸುವುದಾಗಿ ಹಾಸನಕ್ಕೆ ಕರೆಸಿಕೊಂಡಿದ್ದ.