ಪರಿವರ್ತನಾ ಯಾತ್ರೆಗೆ ರಸ್ತೆಯ ಮೇಲೆ ನಿಂತು ಜನರನ್ನು ಕರೆದ ಕೇಂದ್ರ ಸಚಿವ

ಬೆಂಗಳೂರು, ಗುರುವಾರ, 2 ನವೆಂಬರ್ 2017 (15:50 IST)

Widgets Magazine

ನವ ಕರ್ನಾಟಕ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಖಾಲಿ ಇದ್ದ ಖುರ್ಚಿಗಳನ್ನು ಕಂಡ ದಿಗ್ಬ್ರಮೆಗೊಂಡ ಕೇಂದ್ರ ಸಚಿವ ಪಿಯೂಷ್ ಗೋಯಲ್, ತಾವೇ ರಸ್ತೆಯಲ್ಲಿ ನಿಂತು ಜನರನ್ನು ಆಹ್ವಾನಿಸಿದ ಘಟನೆ ನಡೆಯಿತು.
ಕೇಂದ್ರ ಸಚಿವ ಪಿಯೂಷ್ ಗೋಯಲ್, ವೇದಿಕೆಯ ಮೇಲಿದ್ದ ರಾಜ್ಯದ ಬಿಜೆಪಿ ನಾಯಕರಿಗೆ ಕುರ್ಚಿಗಳು ಕಾಳಿ ಹೊಡೆಯುತ್ತಿವೆ ರಸ್ತೆಗಳ ಮೇಲೆ ಜನ ನಿಂತಿದ್ದಾರೆ ಅವರನ್ನು ಕರೆದುಕೊಂಡು ಬನ್ನಿ ಎಂದು ಮನವಿ ಮಾಡಿದರೂ ರಾಜ್ಯ ನಾಯಕರು ಕ್ಯಾರೆ ಎನ್ನಲಿಲ್ಲವಂತೆ.
 
ರಾಜ್ಯ. ಬಿಜೆಪಿ ನಾಯಕರ ವರ್ತನೆಯಿಂದ ಕೋಪಗೊಂಡ ಗೋಯಲ್, ತಾವೇ ರಸ್ತೆಗಿಳಿದು ರಸ್ತೆ ಮೇಲೆ ನಿಂತಿದ್ದ ಜನರನ್ನು ಯಾತ್ರಾ ಸಮಾವೇಶಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಆದರೆ, ಜನ ಮಾತ್ರ ಯಾತ್ರೆಯತ್ತ ಸುಳಿಯದಿರುವುದು ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
 
ನಂತರ ಬಿಜೆಪಿ ಮುಖಂಡರಾದ ಸುರೇಶ್ ಕುಮಾರ್, ಅಶ್ವಥ್ಧ ನಾರಾಯಣ್, ಸಿ.ಟಿ.ರವಿ ಕೂಡಾ ರಸ್ತೆಗೆ ಬಂದು ಓಡಾಡಿ ಜನರನ್ನು ಕಾರ್ಯಕ್ರಮಕ್ಕೆ ತೆರಳುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪಾಕಿಸ್ತಾನ್ ಜಿಂದಾಬಾದ್ ಅನ್ನೋ ದೇಶದ್ರೋಹಿಗಳನ್ನ ಸುಮ್ಮನೆ ಬಿಡಲ್ಲ: ಈಶ್ವರಪ್ಪ

ಬೆಂಗಳೂರು: ನರೇಂದ್ರ ಮೋದಿ ಸೂರ್ಯ ಇದ್ದಂತೆ. ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಉಗಿದ್ರೆ ಸೂರ್ಯನಿಗೆ ...

news

ಟಿಪ್ಪು ಜಯಂತಿಗಿರುವ ಉತ್ಸಾಹ ರಾಜ್ಯೋತ್ಸವ ಆಚರಣೆಗಿಲ್ಲ: ಅಮಿತ್ ಷಾ ಲೇವಡಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಉತ್ಸಾಹ ಇರಲಿಲ್ಲ. ಏಕೆಂದರೆ ಅವರು ...

news

ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ರಾಷ್ಟ್ರದಲ್ಲಿಯೇ ಮೊದಲು: ಯಡಿಯೂರಪ್ಪ

ಬೆಂಗಳೂರು: ಇಡೀ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಸಿದ್ದರಾಮಯ್ಯ ಸರ್ಕಾರ ಎಂದು ಯಡಿಯೂರಪ್ಪ ರಾಜ್ಯ ...

news

ಭ್ರಷ್ಟಾಚಾರದ ಸರ್ಕಾರ ಕೊಡ್ತೇವೆ ಎಂದು ಮೋದಿ ಹೇಳಿದ್ದಾರೆ: ಡಿವಿಎಸ್ ಎಡವಟ್ಟು

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ದೀಪ ಬೆಳಗಿಸುವ ಮೂಲಕ ಯಾತ್ರೆಗೆ ...

Widgets Magazine