ಮೋದಿ ಸರ್ಕಾರದಿಂದ ಉ.ಪ್ರದೇಶ ರೈತರ ಸಾಲ ಮನ್ನಾ: ರಾಜ್ಯದಲ್ಲಿ ರೈತರ ಆಕ್ರೋಶ

ಬೆಂಗಳೂರು, ಶುಕ್ರವಾರ, 17 ಮಾರ್ಚ್ 2017 (15:06 IST)

Widgets Magazine

ಉತ್ತರಪ್ರದೇಶದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎನ್ನುವ ಕೇಂದ್ರ ಸಚಿವ ರಾಧ ಮೋಹನ್ ಸಿಂಗ್ ಹೇಳಿಕೆ ರಾಜ್ಯದ ರೈತರಲ್ಲಿ ಆಕ್ರೋಶ ಮೂಡಿಸಿದೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಅರ್ಧ ಸಾಲ ಮನ್ನಾ ಮಾಡುವಂತೆ ಕೋರಿ ಹಲವಾರು ಬಾರಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿ ಪತ್ರ ಬರೆದಿದ್ದರೂ ಕ್ಯಾರೆ ಎನ್ನದ ಮೋದಿ ಸರಕಾರ, ಇದೀಗ ಉತ್ತರಪ್ರದೇಶ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಮುಂದಾಗಿರುವುದು ಕೋಲಾಹಲಕ್ಕೆ ಕಾರಣವಾಗಿದೆ. 
 
ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ್ರೆ ರೈತರ ಸಾಲ ಮನ್ನಾ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು. ಅದರಂತೆ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
 
ರಾಜ್ಯದ 176 ತಾಲೂಕುಗಳಲ್ಲಿ ಭೀಕರ ಬರಗಾಲವಿದ್ದರೂ ಪ್ರಧಾನಿ ಮೋದಿ ನೇತೃತ್ವದ ಸರಕಾರ ರೈತರ ಸಾಲ ಮನ್ನಾ ಮಾಡಲು ಸಿದ್ದವಿಲ್ಲ. ರೈತರ ಸಾಲ ಮನ್ನಾ ಮಾಡುವಲ್ಲಿ ರಾಜಕೀಯ ತಾರತಮ್ಯವೆಸಗುತ್ತಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ರೈತರ ಸಾಲ ಮನ್ನಾ ರಾಧ ಮೋಹನ್ ಸಿಂಗ್ ಸಿಎಂ ಸಿದ್ದರಾಮಯ್ಯ Farmers Loan Waive Pm Modi Cm Siddaramayya Radha Mohan Singh

Widgets Magazine

ಸುದ್ದಿಗಳು

news

ರಾಹುಲ್ ಗಾಂಧಿ ಸರಳತೆ ಮೋದಿ ಸೋಲಿಗೆ ಕಾರಣವಾಗಲಿದೆ: ರಾಜ್ ಬಬ್ಬರ್

ನವದೆಹಲಿ: ಉತ್ತರಪ್ರದೇಶ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯನ್ನು ಅರಗಿಸಿಕೊಳ್ಳಲಾಗದೆ ಹೀನಾಯ ...

news

ಇವರ ಅಪ್ಪನಾಣೆ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇವರ ಅಪ್ಪನಾಣೆ ಇವರು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಯವರು ರಾಜ್ಯವನ್ನು ಲೂಟಿ ...

news

ಬಿಜೆಪಿ ಧರಣಿ: ವಿಧಾನಸಭೆ ಕಲಾಪ ಸೋಮುವಾರಕ್ಕೆ ಮುಂದೂಡಿಕೆ

ಬೆಂಗಳೂರು: ಡೈರಿ ವಿಷಯ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂದು ಬಿಜೆಪಿ ಮುಖಂಡರು ಧರಣಿ ಮುಂದುವರಿಸಿದ ...

news

15 ಸಚಿವರೇಕೆ, ಇಡೀ ಸಚಿವ ಸಂಪುಟವನ್ನೇ ಕರೆ ತನ್ನಿ: ಶ್ರೀನಿವಾಸ್ ಪ್ರಸಾದ್

ಮೈಸೂರು: ನಂಜನಗೂಡು ಉಪಚುನಾವಣೆಯಲ್ಲಿ 15 ಸಚಿವರೇಕೆ, ಇಡೀ ಸಚಿವ ಸಂಪುಟವನ್ನೇ ಕರೆ ತನ್ನಿ ಎಂದು ಮಾಜಿ ...

Widgets Magazine