ಬೆಂಗಳೂರು: ಇನ್ನು ಮುಂದೆ ನನಗೂ ನನ್ನ ಬೆಂಬಲಿಗರಿಗೂ ಕೆಪಿಜೆಪಿ ಜತೆ ಯಾವುದೇ ಸಂಬಂಧವಿಲ್ಲ. ನಾವೆಲ್ಲರೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇವೆ. ಬೆಂಬಲಿಗರ ಸಹಾಯದೊಂದಿಗೆ ಹೊಸ ಪಕ್ಷ ಸ್ಥಾಪನೆ ಮಾಡುತ್ತಿದ್ದೇವೆ ಎಂದು ಉಪೇಂದ್ರ ತಮ್ಮ ರೆಸಾರ್ಟ್ ನಲ್ಲಿ ಮಾಧ್ಯಮಗಳಿಗೆ ಹೇಳಿದ್ದಾರೆ.