ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಲು ಕಾಂಗ್ರೆಸ್ ನಿರಾಕರಣೆ

ಡೆಹರಾಡೂನ್, ಶುಕ್ರವಾರ, 14 ಏಪ್ರಿಲ್ 2017 (12:01 IST)

Widgets Magazine

ಪಕ್ಷದ ಅಧಿಕೃತ ಕಾರ್ಯಕ್ರಮಗಳಲ್ಲಿ ಒಂದು ತಿಂಗಳವರೆಗೆ ವಂದೇ ಮಾತರಂ ಹಾಡುವುದಿಲ್ಲ ಏನು ಬೇಕಾದರೂ ಆಗಲಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.  
 
ಉತ್ತರಾಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಸರಕಾರ ಮತ್ತು ಪ್ರಮುಖ ವಿಪಕ್ಷವಾದ ಕಾಂಗ್ರೆಸ್ ಮಧ್ಯೆ ತಿಕ್ಕಾಟ ಆರಂಭವಾಗಿದ್ದು, ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
 
ಉತ್ತರಾಖಂಡ್ ರಾಜ್ಯದಲ್ಲಿ ವಾಸಿಸಲು ಬಯಸುವವರು ಕಡ್ಡಾಯವಾಗಿ ವಂದೇ ಮಾತರಂ ಹಾಡಬೇಕು ಎಂದು ಶಿಕ್ಷಣ ಖಾತೆ ಸಚಿವ ಧನ್‌ಸಿಂಗ್ ರಾವತ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಪ್ರತಿಕ್ರಿಯೆ ನೀಡಿದ್ದಾರೆ. 
 
ರಾಜ್ಯಾದ್ಯಂತ ಶಾಲೆಗಳಲ್ಲಿ ಕಡ್ಡಾಯವಾಗಿ ರಾಷ್ಟ್ರ ಗೀತೆ ಹಾಡಬೇಕೆಂದು ಸಚಿವ ರಾವತ್ ಘೋಷಣೆ ಮಾಡಿದ್ದಾರೆ. 
 
ಉತ್ತರಾಖಂಡ್ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಿಶೋರ್ ಉಪಾಧ್ಯಾಯ ಮಾತನಾಡಿ, ಜನತೆಯ ಮೇಲೆ ಇಂತಹ ವಿಷಯಗಳನ್ನು ಹೇರಲು ಸಾಧ್ಯವಿಲ್ಲ. ನಾವು ಮುಂದಿನ ಒಂದು ತಿಂಗಳುಗಳ ಕಾಲ ಪಕ್ಷದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವುದಿಲ್ಲ. ಏನು ಬೇಕಾದರು ಆಗಲಿ ಎದುರಿಸಲು ಸಿದ್ದರಿದ್ದೇವೆ ಎಂದು ಗುಡುಗಿದ್ದಾರೆ.  
 
 ಕಾಂಗ್ರೆಸ್ ಮುಖಂಡರ ದುರ್ವರ್ತನೆಗೆ ಕಿಡಿಕಾರಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಅಜತ್ ಭಟ್, ಕಚೇರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಹಾಡಲು ವಿರೋಧಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಅವನತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಜೆಪಿ ಉತ್ತರಾಖಂಡ್ ಕಾಂಗ್ರೆಸ್ ವಂದೇ ಮಾತರಂ Bjp Congress Uttarakhand Vande Mataram

Widgets Magazine

ಸುದ್ದಿಗಳು

news

ಐಸಿಎಸ್ ಉಗ್ರರ ನೆಲೆಗಳ ಮೇಲೆ ನಾನ್-ನ್ಯೂಕ್ಲಿಯರ್ ಬಾಂಬ್ ದಾಳಿ

ನಂಗರ್‌ಹಾರ್(ಅಫ್ಘಾನಿಸ್ತಾನ್): ಐಸಿಎಸ್ ಉಗ್ರರ ನೆಲೆಗಳ ಮೇಲೆ ಅಮೆರಿಕದ ವಾಯುಸೇನೆ ನಾನ್-ನ್ಯೂಕ್ಲಿಯರ್ ...

news

ಏನೇ ಆಗಲಿ ವಂದೇ ಮಾತರಂ ಹಾಡಲ್ಲ ಎಂದ ಉತ್ತರಾಖಂಡ್ ಕಾಂಗ್ರೆಸ್!

ಡೆಹ್ರಾಡೂನ್: ಏನೇ ಆಗಲಿ, ಯಾರು ಏನೇ ಹೇಳಲಿ ಯಾವುದೇ ಕಾರಣಕ್ಕೂ ವಂದೇ ಮಾತರಂ ಹಾಡಲ್ಲ ಎಂದು ಉತ್ತರಾಖಂಡ್ ...

news

ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆ: ದೆಹಲಿಗೆ ಆಕಾಂಕ್ಷಿಗಳ ದಂಡು

ಬೆಂಗಳೂರು: ಉಪಚುನಾವಣೆಯ ಭರ್ಜರಿ ಗೆಲುವಿನಿಂದ ಬೀಗುತ್ತಿರುವ ಸಿಎಂ ಸಿದ್ದರಾಮಯ್ಯ, ಇಂದು ಸಂಜೆ ದೆಹಲಿಗೆ ...

news

ಬಾಂಬ್‌ನಾಗನ ಮನೆಯಲ್ಲಿ ಕೋಟ್ಯಂತರ ರೂ ಹಣ ಪತ್ತೆ

ಬೆಂಗಳೂರು: ಶ್ರೀರಾಂಪುರದಲ್ಲಿರುವ ಬಾಂಬ್ ನಾಗನ ನಿವಾಸದ ಮೇಲೆ ದಾಳಿ ಮಾಡಿದ ಪೊಲೀಸರು ಕೋಟ್ಯಂತರ ರೂಪಾಯಿ ಹಣ ...

Widgets Magazine