ರಾಜ್ಯ ಸರಕಾರ ಶೀಘ್ರ ಪತನವಾಗುತ್ತೆ ಎಂದ ಹುಚ್ಚ ವೆಂಕಟ್

ನೆಲಮಂಗಲ, ಭಾನುವಾರ, 16 ಸೆಪ್ಟಂಬರ್ 2018 (14:56 IST)

ರಾಜ್ಯ ಸರ್ಕಾರ ಶೀಘ್ರ ಪತನವಾಗುತ್ತದೆ.  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ ಎಂದು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಹೇಳಿದ್ದಾರೆ.
  
ರಾಜ್ಯ ಸಮ್ಮಿಶ್ರ ಸರ್ಕಾರ ಶೀಘ್ರ ಪತನವಾಗುತ್ತದೆ ಎಂದು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಭವಿಷ್ಯ ನುಡಿದಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಮಾರುತಿ‌ನಗರದಲ್ಲಿ, ಗಣೇಶ ಚತುರ್ಥಿ ಕಾರ್ಯಕ್ರಮಕ್ಕೆ ಹುಚ್ಚ ವೆಂಕಟ್ ಆಗಮಿಸಿದ್ದರು. ಈ ವೇಳೆ ಮಾತನಾಡಿ, ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದು ರಾಜ್ಯ ಸರ್ಕಾರಕ್ಕೆ ತೊಂದರೆ ಎಂದು ಭವಿಷ್ಯ ನುಡಿದಿದ್ದಾರೆ. ನಾನು ಸಹ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನ್ನ ತವರೂರು ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಚುನಾವಣೆಯ ಮುನ್ಸೂಚನೆ ನೀಡಿದ್ದಾರೆ.

ಇನ್ನೂ ಮಂಡ್ಯ ಜೆಡಿಎಸ್ ಭದ್ರ ಕೋಟೆ ಎನ್ನುವ ವಿಚಾರವಾಗಿ ಮಾತನಾಡಿ, ನನಗೆ ಜೆಡಿಎಸ್ ಭದ್ರ ಕೋಟೆ ಅನ್ನೋದು ಗೊತ್ತಿಲ್ಲ. ನನಗೆ ಮಂಡ್ಯ ಭದ್ರ ಕೋಟೆ. ಮಂಡ್ಯ ಜನರು ನನ್ನ ಕೈ ಹಿಡಿತಾರೆ. ಒಂದು ವೇಳೆ ಕೈ ಹಿಡಿಯಲಿಲ್ಲಾ ಅಂದರೆ ಒಂದು ಬಲವಾದ ಕಾರಣ ಇರುತ್ತೆ. ಕಾರಣ ಇಲ್ಲದೆ ಮಂಡ್ಯ ಜನ ಕೈ ಬಿಡಲ್ಲ ಎಂದು ರಾಜಕೀಯಕ್ಕೆ ಬರುವ ಮುನ್ಸೂಚನೆ ನೀಡಿದ್ದಾರೆ.

ಇನ್ನೂ ತಮ್ಮ ಡೈಲಾಗ್ ಡಿಲಿವೆರಿ ವೇಳೆ ಕಾರ್ಯಕ್ರಮದಲ್ಲಿ ಕುಡುಕನೊಬ್ಬನಿಗೆ ಕ್ಲಾಸ್ ತೆಗೆದುಕೊಂಡು, ನಾನು ನಿನಗಿಂತ ಜಾಸ್ತೀನಿ ಕುಡಿತಿನಿ ಕಣೋ, ಕುಡಿದ್ದಿನಿ ಅಂತಾ ಜಾಸ್ತಿ ಮಾತನಾಡಬಾರದು. ಸುಮ್ನ್ ನಿಂತ್ಕೋಬೇಕು ಎಂದರು. ಕಾರ್ಯಕ್ರಮದ ಕೊನೆಯಲ್ಲಿ ಹುಚ್ಚವೆಂಕಟ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವಕರ ದಂಡೇ ಮುಗಿಬಿದ್ದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೋನಿನಲ್ಲಿ ಹೆಚ್ಚುಕಾಲ ಮಾತನಾಡಿದ್ದಕ್ಕೆ ಕೋಪಗೊಂಡು ಸಹೋದರಿಯನ್ನೇ ಕೊಲೆ ಮಾಡಿದ ಸಹೋದರ

ಮುಂಬೈ : ಸಹೋದರನೊಬ್ಬ ತನ್ನ ಸಹೋದರಿ ಹೆಚ್ಚು ಹೊತ್ತು ಮೊಬೈಲ್ ನಲ್ಲಿ ಮಾತನಾಡುತ್ತಿರುವುದಕ್ಕೆ ಆಕೆಯನ್ನು ...

news

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದು ಬಾವಿಗೆ ಎಸೆದ ಪಾತಕಿಗಳು

ವಿಜಯಪುರ : ವಿಜಯಪುರದಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ...

news

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ?

ಬೆಂಗಳೂರು: ಒಂದೆಡೆ ದೇಶದಲ್ಲಿ ತೈಲ ಬೆಲೆ ದಾಖಲೆಯ ಏರಿಕೆ ಕಾಣುತ್ತಿದ್ದರೆ, ರಾಜ್ಯದಲ್ಲಿ ಪೆಟ್ರೋಲ್, ...

news

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ರೆ ನಂಗೇನೂ ಆಗಲ್ಲ ಎಂದ ಕೇಂದ್ರ ಸಚಿವ

ನವದೆಹಲಿ: ದೇಶದಲ್ಲಿ ದಿನೇ ದಿನೇ ತೈಲ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವ ರಾಮ್ ದಾಸ್ ...

Widgets Magazine