ರಸ್ತೆಯ ಮೇಲೆ ಮೂತ್ರ ವಿಸರ್ಜಿಸಿ ವಿವಾದಕ್ಕೀಡಾದ ಮಹಾರಾಷ್ಟ್ರ ಸಚಿವ

ಮುಂಬೈ, ಸೋಮವಾರ, 20 ನವೆಂಬರ್ 2017 (13:16 IST)

ಮಹಾರಾಷ್ಟ್ರದ ಬಿಜೆಪಿ ಸಚಿವರೊಬ್ಬರು ರಸ್ತೆ ಬದಿಯಲ್ಲಿ ಮೂತ್ರ ಮಾಡುತ್ತಿರುವ ವಿಡಿಯೋ ದೃಶ್ಯ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಚತಾ ಅಭಿಯಾನ, ಶೌಚಾಲಯದ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ನಿರತರಾಗಿರುವ ಮಧ್ಯೆ ಅವರದೇ ಪಕ್ಷದ ಜಲಸಂಪನ್ಮೂಲ ಖಾತೆ ಸಚಿವರಾಗಿರುವ ರಾಮ್ ಶಿಂಧೆ, ಕಾರಿನಲ್ಲಿ ಸೋಲಾಪುರ್-ಬಾರ್ಷಿ ಮಾರ್ಗವಾಗಿ ತೆರಳುತ್ತಿರುವ ಸಂದರ್ಭದಲ್ಲಿ ರಸ್ತೆಯ ಮೇಲೆ ಮೂತ್ರ ಮಾಡಿ ವಿವಾದಕ್ಕೆ ಕಾರಣವಾಗಿದ್ದಾರೆ.
 
ಸುಮಾರು ಒಂದು ತಿಂಗಳಿನಿಂದ ಸರಕಾರದ ಮಹತ್ವದ ಯೋಜನೆಯಾದ ಜಲಯುಕ್ತ ಶಿಬಿರ ಯೋಜನೆ ಜಾರಿಗಾಗಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನಿರಂತರವಾಗಿ ಪ್ರವಾಸ ಮಾಡುತ್ತಿದ್ದರಿಂದ ಅನಾರೋಗ್ಯ ಎದುರಾಗಿತ್ತು ಎಂದು ತಿಳಿಸಿದ್ದಾರೆ. 
 
ನಾನು ಜ್ವರದಿಂದ ಬಳಲುತ್ತಿದ್ದರಿಂದ ಮೂತ್ರ ಮಾಡಲು ಶೌಚಾಲಯಕ್ಕಾಗಿ ಹುಡುಕಾಟ ನಡೆಸಿದರೂ ಕಾಣಿಸಲಿಲ್ಲ. ಆದ್ದರಿಂದ ರಸ್ತೆಯ ಮೇಲೆ ಮೂತ್ರ ಮಾಡಬೇಕಾಯಿತು ಎಂದು ಸಚಿವ ರಾಮ್ ಶಿಂಧೆ ಪ್ರತಿಕ್ರಿಯೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಪಕ್ಷಗಳು ಆರೋಪ ಸಾಬೀತು ಮಾಡಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ರಾಯರೆಡ್ಡಿ

ಕೊಪ್ಪಳ: ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿರುವ ಕಂಪ್ಯೂಟರ್ ವಿತರಣೆಯಲ್ಲಿ ಭಾರಿ ಭ್ರಷ್ಟಾಚಾರವಾಗಿದೆ ...

news

ದೀಪಿಕಾ ಪಡುಕೋಣೆ ಪರ ಸಚಿವ ಡಿ.ಕೆ.ಶಿವಕುಮಾರ್ ಬ್ಯಾಟಿಂಗ್

ಬೆಂಗಳೂರು: ಬಾಲಿವುಡ್‌ನ ಪದ್ಮಾವತಿ ಚಿತ್ರ ವಿವಾದದಿಂದಾಗಿ ಕನ್ನಡಾಂಬೆಯ ಹೆಮ್ಮೆಯ ಪುತ್ರಿಯಾದ ದೀಪಿಕಾ ...

news

ಉ.ಕರ್ನಾಟಕ ಅಭಿವೃದ್ಧಿ ಚರ್ಚೆಗೆ ಉ.ಕ ಭಾಗದ ಶಾಸಕರೇ ಗೈರು?

ಬೆಳಗಾವಿ: ವಿಧಾನಸಭೆ ಅಧಿವೇಶನದಲ್ಲಿ ಇಂದು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆಯುವ ಚರ್ಚೆಗೆ ಉತ್ತರ ...

news

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ದಿನಾಂಕ ಪ್ರಕಟ

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ದೆಹಲಿಯಲ್ಲಿ ನಡೆಯುತ್ತಿದ್ದು, ಅಧ್ಯಕ್ಷ ಪಟ್ಟಕ್ಕೆ ಆಂತರಿಕ ...

Widgets Magazine
Widgets Magazine