ಯಾವುನೋ ಹುಚ್ಚ ಕಳುಹಿಸಿದ ನೋಟಿಸ್‌ಗೆ ಹೆದ್ರಬೇಕಾ?: ವಿನಯ್ ಕುಲಕರ್ಣಿ

ಧಾರವಾಡ, ಶುಕ್ರವಾರ, 10 ನವೆಂಬರ್ 2017 (15:53 IST)

 ಯಾವುನೋ ಹುಚ್ಚ ಕಳುಹಿಸಿದ ನೋಟಿಸ್‌ಗೆ ಹೆದ್ರಬೇಕಾ? ಇಂತಹ ನೂರು ನೋಟಿಸ್ ಬಂದರೂ ಹೆದರುವುದಿಲ್ಲ ಎಂದು ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.
ಹೋರಾಟ ರಾಜಕೀಯ ಪ್ರೇರಿತವಲ್ಲ. ನಮಗೆ ನಮ್ಮ ಹಕ್ಕು ದೊರೆಯಲೇಬೇಕು. ಹಕ್ಕು ದೊರೆಯುವವರೆಗೆ ಹೋರಾಟ ನಿಲ್ಲದು ಎಂದು ಗುಡುಗಿದ್ದಾರೆ.
 
ಪ್ರತ್ಯೇಕ ಲಿಂಗಾಯುತ ಧರ್ಮ ಹೋರಾಟ ವಿರೋಧಿಸಿ ನಿವೃತ್ತ ಐಎಎಸ್ ಅಧಿಕಾರಿ ಶಶಧರ್ ಶಾನಭೋಗ್ ಎನ್ನುವವರು ಸಚಿವ ವಿನಯ್ ಕುಲಕರ್ಣಿ ವಿರುದ್ಧ ದೂರು ದಾಖಲಿಸಿ ನೋಟಿಸ್ ರವಾನಿಸಿದ್ದಾರೆ. 
 
ಕೆಲವರು ನಮ್ಮ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇಂತಹ ದುಷ್ಟಶಕ್ತಿಗಳಿಗೆ ನಾವು ಹೆದರುವುದಿಲ್ಲ ಎಂದು  ತಿರುಗೇಟು ನೀಡಿದ್ದಾರೆ.
 
ಲಿಂಗಾಯುತ ಸಮಾವೇಶದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿರುವುದು ನೋಡಿದ ವೀರಶೈವರ ಜಂಘಾಬಸ ಉಡುಗಿ ಕುಸಿದು ಹೋಗಿದೆ ಎಂದು ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಮುಖಂಡರಿಗೆ ಎರಡು ನಾಲಿಗೆ ಇದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಮುಖಂಡರಿಗೆ ಎರಡು ನಾಲಿಗೆ ಇದೆ. ಆದ್ದರಿಂದಲೇ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ...

news

ಪ್ರತಿಯೊಂದು ಕ್ಷೇತ್ರಕ್ಕೂ ಪ್ರತ್ಯೇಕ ರಣನೀತಿ, ಗೆಲುವು ನಮ್ಮದೆ: ಪರಮೇಶ್ವರ್

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಯೊಂದು ವಿಧಾನಸಭೆ ಕ್ಷೇತ್ರಕ್ಕೆ ಪ್ರತ್ಯೇಕ ರಣನೀತಿ ...

news

ಪ್ರಜ್ವಲ್ ಸ್ಪರ್ಧೆಗೆ ಎಚ್‌.ಡಿ.ಕುಮಾರಸ್ವಾಮಿ ತೀರ್ಮಾನವೇ ಅಂತಿಮ: ಎಚ್.ಡಿ.ರೇವಣ್ಣ

ಹಾಸನ: ಪುತ್ರ ಪ್ರಜ್ವಲ್ ವಿಧಾನಸಭೆ ಚುನಾವಣೆ ಸ್ಪರ್ಧೆ ಕುರಿತಂತೆ ಜೆಡಿಎಸ್ ರಾಜ್ಯಾಧ್ಯಕ್ಷ ...

news

ಸಿಎಂ ಸಿದ್ದರಾಮಯ್ಯ ಓರ್ವ ಬಚ್ಚಾ: ಯಡಿಯೂರಪ್ಪ ವಾಗ್ದಾಳಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಓರ್ವ ಬಚ್ಚಾ. ಲಜ್ಜಗೆಟ್ಟ ನಡುವಳಿಕೆಯ ಮುಖ್ಯಮಂತ್ರಿ ಎಂದು ಬಿಜೆಪಿ ...

Widgets Magazine
Widgets Magazine