ಕೇಂದ್ರದ ನೆರೆ ಅಧ್ಯಯನ ತಂಡ ಭೇಟಿ

ಬುಧವಾರ, 12 ಸೆಪ್ಟಂಬರ್ 2018 (16:59 IST)

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ನಿಯೋಗ ಪ್ರಧಾನಿ ಭೇಟಿ ಮಾಡಿದ ಬೆನ್ನಲ್ಲೇ, ಕೇಂದ್ರದ ರಾಜ್ಯಕ್ಕೆ ಆಗಮಿಸಿದೆ.
 
ಕೇಂದ್ರದ ನೆರೆ ಅಧ್ಯಯನ ತಂಡ ಮಂಗಳೂರಿಗೆ ಆಗಮಿಸಿದೆ.  ಮಂಗಳೂರಿನಲ್ಲಿ ವೀಕ್ಷಣೆ ಬಳಿಕ ಉಡುಪಿಗೆ ತೆರಳಿತು. ಸಂಜೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಸಭೆ ನಡೆಸಿತು.

ನಾಳೆ ಪುತ್ತೂರು, ಬೆಳ್ತಂಗಡಿ, ಸುಬ್ರಮಣ್ಯ ತಾಲೂಕುಗಳಿಗೆ ನೆರೆ ಅಧ್ಯಯನ ತಂಡ ಭೇಟಿ ನೀಡಲಿದೆ. ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಹಾಗೂ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರೊಂದಿಗೆ ತಂಡ ಸಭೆ ನಡೆಸಿತು.

ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ನಷ್ಟ ಆಗಿದೆ. ಸಮಗ್ರ ವರದಿ ನೀಡುವಂತೆ ಸಚಿವ ಯು. ಟಿ. ಖಾದರ್ ಕೇಂದ್ರ ತಂಡಕ್ಕೆ ಮನವಿ ಮಾಡಿದರು.


 

ವಿಚಿತ್ರ ಸುರಂಗ ಪತ್ತೆಯಾಗಿದ್ದು ಎಲ್ಲಿ ಗೊತ್ತಾ?

ಆ ಗ್ರಾಮದಲ್ಲಿ ಇದ್ದಕ್ಕಿದ್ದಂತೆಯೇ ಸುರಂಗವೊಂದು ಪತ್ತೆಯಾಗಿದೆ. ಗ್ರಾಮದ ಪ್ರಮುಖ ರಸ್ತೆ ಹಾಗೂ ಮುಖ್ಯ ...

ನಗರಸಭಾ ಸದಸ್ಯನ ಕೈಯಲ್ಲಿ ಅರಳಿದ ಗಣಪ

ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯೋರ್ವರು ಒತ್ತಡದ ನಡುವೆಯೂ 6೦ಕ್ಕೂ ಹೆಚ್ಚು ಗಣೇಶ ...

ಹಿರಣ್ಯಕೇಶಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ: ಆತಂಕದಲ್ಲಿ ಜನತೆ

ಹಿರಣ್ಯಕೇಶಿ ನದಿಯಲ್ಲಿ ಆಗಾಗ್ಗೆ ಮೊಸಳೆಯೊಂದು ಕಾಣಿಸಿಕೊಳ್ಳುತ್ತಿದೆ. ಇದು ಜನರಲ್ಲಿ ಆತಂಕಕ್ಕೆ ...

ಶ್ರೀ ಕೃಷ್ಣ ದೇವಾಲಯಕ್ಕೆ ಕನ್ನ: ಹುಂಡಿ ಕಳ್ಳತನ

ಕೃಷ್ಣ ದೇಗುಲದಲ್ಲಿ ಕಳ್ಳತನ ಮಾಡಲಾಗಿದೆ. ತಡರಾತ್ರಿ ದೇವಸ್ಥಾನದ ಬಾಗಿಲು ಒಡೆದ ಕಳ್ಳರು, ಹುಂಡಿಯನ್ನು ...