ಗುಜರಾತ್ ಕಾಂಗ್ರೆಸ್ ಶಾಸಕರ ವೆಚ್ಚ ನಾವು ಭರಿಸುತ್ತಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು, ಸೋಮವಾರ, 31 ಜುಲೈ 2017 (13:25 IST)

ರೆಸಾರ್ಟ್‌ನಲ್ಲಿ ಗುಜರಾತ್ ಶಾಸಕರ ವಾಸ್ತವ್ಯ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿದ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಾಸಕರ ರೂಮಿನ ಬಾಡಿಗೆಯನ್ನು ಗುಜರಾತ್ ಸರಕಾರ ಭರಿಸುತ್ತದೆ ಎಂದು ಹೇಳಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಜರಾತ್ ರಾಜ್ಯದಿಂದ ಆಗಮಿಸಿರುವ ಕಾಂಗ್ರೆಸ್ ಶಾಸಕರ ಯಾವುದೇ ವೆಚ್ಚವನ್ನು ರಾಜ್ಯ ಕಾಂಗ್ರೆಸ್ ಭರಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
 
ಗುಜರಾತ್ ರಾಜ್ಯಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು, ಕಾಂಗ್ರೆಸ್ ಶಾಸಕರಿಗೆ ತಲಾ 15 ಕೋಟಿ ಆಫರ್ ನೀಡಿದ್ದಲ್ಲದೇ ಜೀವ ಬೆದರಿಕೆ ಕೂಡಾ ಒಡ್ಡಲಾಗುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್ ತೊರೆದು ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.
 
ಗುಜರಾತ್ ಕಾಂಗ್ರೆಸ್ ಶಾಸಕರು ಇಂದು ಮೈಸೂರು-ಕೊಡಗು ಪ್ರವಾಸಕ್ಕೆ ತೆರಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಗುಜರಾತ್ ಕಾಂಗ್ರೆಸ್ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯ ಶಕ್ತಿ ಸಿವ್ಹ ಗೋಯಲ್ Congress Gujarat Congress Cm Siddaramaiah D.k.shivkumar Shakti Sinha Goel

ಸುದ್ದಿಗಳು

news

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಮುಸ್ಲೀಂ ಆಗಿರಲಿಲ್ಲ: ತೋಹಿದ್‌ ಜಮಾತ್‌

ಮಾಜಿ ರಾಷ್ಟ್ರಪತಿ ದಿ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಮುಸ್ಲಿಂ ಎಂದೂ ಪರಿಗಣಿಸಿಲ್ಲ. ಕಲಾಂ ಅವರ ಪ್ರತಿಮೆ ...

news

ಕೊಲೆಗಡುಕರನ್ನು ಸಮರ್ಥಿಸುತ್ತಿರುವ ಬಿಜೆಪಿ ನಾಯಕರು: ಖರ್ಗೆ

ನವದೆಹಲಿ: ಗೋವು ರಕ್ಷಣೆಯ ನೆಪದಲ್ಲಿ ಬಿಜೆಪಿ ನಾಯಕರು ಕೊಲೆಗಡುಕರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ...

news

ಬಿಜೆಪಿ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಇನ್ನಿಲ್ಲ

ಬಿಜೆಪಿಯ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ವಿಧಿವಶರಾಗಿದ್ದಾರೆ. ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಬಿ.ಬಿ. ...

news

ಪತ್ನಿಯನ್ನ ಕೂಡಿ ಹಾಕಿ ಅಸ್ವಾಭಾವಿಕ ಸೆಕ್ಸ್ ನಡೆಸುತ್ತಿದ್ದ ಪತಿ ಬಂಧನ

ಪಾಪಿ ಪತಿಯೊಬ್ಬ ಮಹಿಳೆಯನ್ನ ಕಬ್ಬಿಣದ ಸರಳಿನಲ್ಲಿ ಬಂಧಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ...

Widgets Magazine