ರಕ್ತ ಕೊಟ್ಟೇವು ನೀರು ಕೊಡಲ್ಲ ಎಂದು ಘೋಷಣೆ ಕೂಗಿ ಇರಿದುಕೊಂಡ ಯುವಕ

ಬೆಂಗಳೂರು, ಶುಕ್ರವಾರ, 9 ಸೆಪ್ಟಂಬರ್ 2016 (15:11 IST)

Widgets Magazine

ಕಾವೇರಿ ನೀರು ಬಿಡುಗಡೆ ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಚೋಳರಪಾಳ್ಯ ನಿವಾಸಿಯಾದ ಪ್ರಭು, ಕೊಟ್ಟೇವು ನೀರು ಕೊಡುವುದಿಲ್ಲ ಎಂದು ಘೋಷಣೆ ಕೂಗುತ್ತಾ ಚಾಕುವಿನಿಂದ ತನ್ನ ಹೊಟ್ಟೆಗೆ ತಿವಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
 
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನಾಕಾರರು ಇಂದು ಫ್ರೀಡಂ ಪಾರ್ಕ್‌ನಲ್ಲಿ ಘೋಷಣೆಗಳನ್ನು ಕೂಗುತ್ತಿದ್ದಾಗ, ಯುವಕನೊಬ್ಬ ರಕ್ತ ಕೊಟ್ಟೇವು ನೀರು ಕೊಡುವುದಿಲ್ಲ ಎಂದು ಘೋಷಣೆ ಕೂಗಿ ಚಾಕುವಿನಿಂದ ಇರಿದುಕೊಂಡಿದ್ದಾನೆ.
 
ಗಂಭೀರವಾಗಿ ಗಾಯಗೊಂಡ ಯುವಕನನ್ನು ಸೇಂಟ್ ಮಥಾಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಯುವಕ ಅಪಾಯದಿಂದ ಪಾರಾಗಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
 
ಹೊಟ್ಟೆಭಾಗದಲ್ಲಿ ರಕ್ತ ಸುರಿಯುತ್ತಿರುವುದರಿಂದ ಆತನಿಗೆ ಹೊಲಿಗೆ ಹಾಕಬೇಕಾಗಿದೆ. ಹೊಲಿಗೆ ಹಾಕಿದ ನಂತರ ರಕ್ತ ಹರಿಯುವುದು ನಿಲ್ಲಲಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಮಂಡ್ಯದಲ್ಲಿ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದ್ದು, ವಿಷ ಸೇವಿಸಿದ ರೈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಇದೇನಾ ನಿಮ್ಮ ಅಚ್ಚೇ ದಿನ್-ಮೋದಿಯನ್ನು ಪ್ರಶ್ನಿಸಿದ ಕಾಮೆಡಿಯನ್ ಕಪಿಲ್ ಶರ್ಮಾ

ಮುಂಬೈ: ಸ್ಟಾರ್ ಕಾಮೆಡಿಯನ್ ಕಪಿಲ್ ಶರ್ಮಾ ತಮ್ಮ ಹಾಸ್ಯ ಪ್ರವೃತ್ತಿಗೆ ಮತ್ತು ಕಾಮಿಕ್ ಕೌಶಲ್ಯಗಳಿಗೆ ...

news

ಮಾಜಿ ಸಚಿವ ಅಂಬರೀಶ್ ನಿವಾಸಕ್ಕೆ ಪ್ರತಿಭಟನೆಕಾರರ ಮುತ್ತಿಗೆ

ಮಂಡ್ಯ: ಸುಪೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ...

news

ಕರ್ನಾಟಕ ಬಂದ್: ಮಂಡ್ಯದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್

ಮಂಡ್ಯ: ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿದ ಪ್ರತಿಭಟನಾಕಾರರ ಗುಂಪಿನ ಮೇಲೆ ಪೊಲೀಸರು ...

news

ಕಾವೇರಿ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯಗೂ ಜಯಲಲಿತಾಗೂ ಮದ್ವೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾಗೂ ಮದ್ವೆ ...

Widgets Magazine