ನಮಗೆ ಯಾರ ರುಂಡವೂ ಬೇಕಾಗಿಲ್ಲ: ಎಚ್.ಡಿ.ರೇವಣ್ಣ ತಿರುಗೇಟು

ಹಾಸನ, ಸೋಮವಾರ, 24 ಜುಲೈ 2017 (17:45 IST)

ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ರೆ ರುಂಡವನ್ನು ಕತ್ತರಿಸಿಕೊಳ್ಳುವುದಾಗಿ ಹೇಳಿದ್ದ ಜಮೀರ್ ಅಹ್ಮದ್ ಖಾನ್‌ಗೆ ತಿರುಗೇಟು ನೀಡಿದ ಜೆಡಿಎಸ್‌ ಮುಖಂಡ ಎಚ್.ಡಿ.ರೇವಣ್ಣ, ನಮಗೆ ಯಾರ ರುಂಡವೂ ಬೇಕಾಗಿಲ್ಲ ಎಂದು ಹೇಳಿದ್ದಾರೆ.
 
ಕಾಂಗ್ರೆಸ್ ಪಕ್ಷದಲ್ಲಿ ವೆಕೆನ್ಸಿಯಿರುವುದರಿಂದ ಅಲ್ಲಿಗೆ ಹೋಗಿದ್ದಾರೆ. ಮಿಠಾಯಿ ಗಿಠಾಯಿ ಸಿಗುತ್ತದೆ ಎನ್ನುವ ಆಸೆ ಇರಬಹುದು. ಡಿಸೆಂಬರ್ ವರೆಗೆ ಯಾಕೆ ಕಾಯುವುದು. ಇವತ್ತೇ ಕಾಂಗ್ರೆಸ್ ಪಕ್ಷ ಸೇರಲಿ ಎಂದು ಟಾಂಗ್ ನೀಡಿದ್ದಾರೆ.
 
ದಿನಬೆಳಗಾದ್ರೆ ಜೆಡಿಎಸ್ ಪಕ್ಷದ ಬಗ್ಗೆ ಟೀಕಿಸುತ್ತಾರೆ. ಬಂಡಾಯ ಶಾಸಕರಿಗೆ ನೈತಿಕತೆಯಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸಲಿ ಎಂದು ಸವಾಲ್ ಹಾಕಿದರು.
 
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಂಡಾಯ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಮಾಜಿ ಸಚಿವ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಎಚ್.ಡಿ.ರೇವಣ್ಣ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಕಾಂಗ್ರೆಸ್ H D Revanna Jds Congress Zameer Ahmed Khan

ಸುದ್ದಿಗಳು

news

‘ಜಮೀರ್ ಅಹಮ್ಮದ್ ರುಂಡ ತಗೊಂಡು ನಾವೇನು ಮಾಡೋಣ?’

ಬೆಂಗಳೂರು: ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದರೆ ರುಂಡ ಕತ್ತರಿಸಿಕೊಳ್ಳುತ್ತೇನೆ ಎಂದು ಸವಾಲು ...

news

ತಾಯಿಯ ಲಿವ್-ಇನ್ ಸಂಗಾತಿ ಕೊಲೆ ಮಾಡಿದ ಮಗ

ತನ್ನ ತಾಯಿಯೊಂದಿಗೆ ಲಿವ್ ಇನ್ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ವೃದ್ಧನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ...

news

ಎಣ್ಣೆ ಹೊಡೆಯೋರಿಗೊಂದು ಕಿಕ್ ಕೊಡುವ ಸುದ್ದಿ!

ಬೆಂಗಳೂರು: ಹೆದ್ದಾರಿಗಳ ಆಸುಪಾಸಿನಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಇತ್ತೀಚೆಗಿನ ಕೇಂದ್ರ ಸರ್ಕಾರದ ...

news

ನೀರು, ವಿದ್ಯೆ, ಮನೆ ಕೊಟ್ಟವರನ್ನು ಜನ ಮರೆಯೋಲ್ಲ,ಜೈಲಿಗೆ ಹೋದವರನ್ನೂ ಜನ ಮರೆಯೋಲ್ಲ: ಸಿಎಂ

ಬೆಂಗಳೂರು: ನೀರು ವಿದ್ಯೆ, ಮನೆ ಕೊಟ್ಟವರನ್ನು ಜನ ಮರೆಯೋಲ್ಲ, ಜೈಲಿಗೆ ಹೋದವರನ್ನು ಜನ ಮರೆಯೋಲ್ಲ ಎಂದು ...

Widgets Magazine