ನಾವೂ ರೈತರ ಸಾಲ ಮನ್ನಾ ಮಾಡುತ್ತೇವೆ: ಯಡಿಯೂರಪ್ಪ ಘೋಷಣೆ

ಮೈಸೂರು, ಬುಧವಾರ, 5 ಏಪ್ರಿಲ್ 2017 (17:17 IST)

Widgets Magazine

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ನಾವು ಕೂಡಾ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಘೋಷಿಸಿದ್ದಾರೆ.
 
ಉತ್ತರಪ್ರದೇಶದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ರೈತರ ಸಾಲ ಮನ್ನಾ ಮಾಡಿ ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿದೆ ಎಂದರು.
 
ಉತ್ತರಪ್ರದೇಶದಲ್ಲಿ ರಾಜ್ಯ ಸರಕಾರ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿದೆ. ಇದರಲ್ಲಿ ಕೇಂದ್ರದ ಯಾವುದೇ ಪಾಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ರಾಜ್ಯ ಸರಕಾರ ರೈತರ ಸಾಲವನ್ನು ಮನ್ನಾ ಮಾಡುವುದು ಬಿಟ್ಟು ಅನಗತ್ಯವಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಮೊದಲು ರೈತರ ಸಾಲವನ್ನು ಮನ್ನಾ ಮಾಡಲಿ ಎಂದು ಆಗ್ರಹಿಸಿದರು.
 
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ. ಉಪಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಯಲಲಿತಾ ವಿರುದ್ಧದ ಪ್ರಕರಣದ ಅರ್ಜಿ ವಜಾ

ಬೆಂಗಳೂರು: ಜಯಲಲಿತಾ ಅವರನ್ನು ದೋಷಿಯಾಗಿ ಪರಿಗಣಿಸಬೇಕು ಎಂದು ಕರ್ನಾಟಕ ಸರಕಾರ ಸಲ್ಲಿಸಿದ್ದ ಮೇಲ್ಮನವಿ ...

news

ನಮ್ಮನ್ನು ಗೆಲ್ಲಿಸದಿದ್ರೆ ಅಭಿವೃದ್ಧಿ ಆಗಲ್ಲ: ಸಿಎಂ ಸಿದ್ದರಾಮಯ್ಯ

ಗುಂಡ್ಲುಪೇಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ನಮ್ಮನ್ನು ಗೆಲ್ಲಿಸದಿದ್ರೆ ಅಭಿವೃದ್ಧಿ ಆಗಲ್ಲ ...

news

ಓಲಾ ಕ್ಯಾಬ್‌ ಗ್ರಾಹಕನಿಗೆ ಬಂದ ಬಿಲ್ ಕೇವಲ 149 ಕೋಟಿ ರೂ.

ಮುಂಬೈ: ನಗರದ ನಿವಾಸಿಯಾದ ಸುಶೀಲ್ ನರಸಿಯಾನ್, ಅಗತ್ಯ ಕಾರ್ಯಕ್ಕಾಗಿ ತೆರಳಲು ಓಲಾ ಕ್ಯಾಬ್ ...

news

ಆಸ್ಪತ್ರೆಯಲ್ಲಿ ಮಗನನ್ನ ನೋಡಿ ಪ್ರಥಮ್ ತಂದೆ ಹೇಳಿದ್ದು

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿರುವ ಮಗ ಪ್ರಥಮ್`ನನ್ನ ತಂದೆ ಮಲ್ಲಣ್ನ ಭೇಟಿಯಾಗಿದ್ದಾರೆ. ನಾಗರಬಾವಿ ...