ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಮಂಡಿಸಿಯೇ ಸಿದ್ದ : ಸಿಎಂ ಘೋಷಣೆ

ಬೆಂಗಳೂರು, ಶುಕ್ರವಾರ, 17 ನವೆಂಬರ್ 2017 (16:21 IST)

ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಮಂಡಿಸಿಯೇ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
 
ಖಾಸಗಿ ವೈದ್ಯರ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಸೂದೆಯೇ ಬೇಡ ಎಂದು ಹೇಳುವುದನ್ನು ಸರಕಾರ ಒಪ್ಪುವುದಿಲ್ಲ. ಅದರಲ್ಲಿ ಯಾವ ತಿದ್ದುಪಡಿ ಬೇಕು ಎನ್ನುವುದನ್ನು ಮಾತ್ರ ಹೇಳಿ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
 
ವಿಧೇಯಕದಲ್ಲಿರುವ ಅಂಶಗಳ ಬಗ್ಗೆ ಮಾಹಿತಿ ಗೊತ್ತಿರದೆ ಮುಷ್ಕರ ಮಾಡಿದ್ದು ಎಷ್ಟು ಸರಿ? ಇಂದಿನ ಪರಿಸ್ಥಿತಿಗೆ ಯಾರು ಹೊಣೆ?. ಸೂಕ್ತ ಚಿಕಿತ್ಸೆ ನೀಡದೆ ವ್ಯಕ್ತಿ ಸತ್ತರೆ ನಿಮ್ಮನ್ನು ಕೊಲೆಗಾರ ಎನ್ನಬಾರದೇ? ಎಂದು ವೈದ್ಯರ ವಿರುದ್ಧ ಗರಂ ಆದರು.
 
ವಿಧೇಯಕ ಬೇಡವೇ ಬೇಡ ಎನ್ನುವುದನ್ನು ಬಿಟ್ಟು ಬೇರೆ ಏನಾದರೂ ತೊಂದರೆಗಳಿದ್ದರೆ ಸರಕಾರದ ಗಮನಕ್ಕೆ ತನ್ನಿ. ವೈದ್ಯರು ಪ್ರತಿಭಟನೆ ಮಾಡುವುದು ಸರಿಯಲ್ಲ. ಜನರಿಗೆ ಎಷ್ಟೊಂದು ತೊಂದರೆಯಾಗಿದೆ ಹಲವಾರು ಜೀವಗಳು ಬಲಿಯಾಗಿವೆ ಅದಕ್ಕೆ ನೀವು ಹೊಣೆಯಾಗ್ತೀರಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. 
 
ಕೆಲ ಜಿಲ್ಲೆಗಳಲ್ಲಿ ಖಾಸಗಿ ವೈದ್ಯರ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಹಣ ನೀಡಲಾಗಿದೆ.ಇದೊಂದು ರಾಜಕೀಯ ಪ್ರೇರಿತ ಮುಷ್ಕರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

59 ವರ್ಷದವನಿಂದ 15ರ ಬಾಲೆಯ ಮೇಲೆ ರೇಪ್

ಕೊಡಗು: 59 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು 15 ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ...

news

ಸೆಕ್ಸ್ ಸುಖ ಕೊಟ್ರೆ ಮಾತ್ರ ವಿದೇಶಕ್ಕೆ ಕಳಿಸ್ತೇನೆ ಎಂದು ರೇಪ್ ಎಸಗಿದ ಟ್ರಾವೆಲ್ ಏಜೆಂಟ್

ಮೋಗಾ: ವಿದೇಶಕ್ಕೆ ಕಳುಹಿಸುವ ಆಮಿಷವೊಡ್ಡಿ 8 ತಿಂಗಳುಗಳ ಕಾಲ ನಿರಂತರವಾಗಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ...

news

ಬಿಜೆಪಿಗೆ ಮತಹಾಕದಿದ್ರೆ ಕಷ್ಟ ಎದುರಿಸಲು ಸಿದ್ದರಾಗಿ: ಮುಸ್ಲಿಮರಿಗೆ ಬಿಜೆಪಿ ನಾಯಕನ ಧಮ್ಕಿ

ಲಕ್ನೋ: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಹಾಕದಿದ್ರೆ ಕಷ್ಟ ಎದುರಿಸಲು ಸಿದ್ದರಾಗಿ ಎಂದು ...

news

ಪತಿಗೆ ಮೋಸ ಮಾಡಿ ಅಕ್ಕನ ಗಂಡನೊಂದಿಗೆ ಸೆಕ್ಸ್

ಬೆಂಗಳೂರು: ಸ್ವಂತ ಅಕ್ಕನಿಗೆ ಮೋಸ ಮಾಡಿ ಆಕೆಯ ಗಂಡನೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡ ಮಹಿಳೆಯೊಬ್ಬಳು ...

Widgets Magazine
Widgets Magazine