ಕನ್ನಡ ಚಲನಚಿತ್ರದ ಹಿರಿಯ ನಟ, ಹಾಸ್ಯ ನಟ ದ್ವಾರಕೀಶ್ ಅವರ ಆರೋಗ್ಯದ ಬಗ್ಗೆ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡಲಾರಂಭಿಸಿದೆ.ಆದರೆ ನಟ ದ್ವಾರಕೀಶ್ ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ವಿಡಿಯೋ ಒಂದನ್ನು ಬಿಡುಗಡೆಗೊಳಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.ತಮ್ಮ ಮನೆಯಲ್ಲಿ ದೇವರ ಪೂಜೆ ಮಾಡುತ್ತಾ ವಿಡಿಯೋ ಮಾಡಿರುವ ದ್ವಾರಕೀಶ್ ತಾವು ಚೆನ್ನಾಗಿರೋದಾಗಿ ಹೇಳಿದ್ದಾರೆ. ಚೆನ್ನಾಗಿದ್ದೇನೆ.ಆರೋಗ್ಯವೂ ಸರಿಯಾಗಿದೆ. ತಮ್ಮ ಬಗ್ಗೆ ಹರಿದಾಡುತ್ತಿರೋದು ಸುಳ್ಳು ಸುದ್ದಿ ಅಂತ ದ್ವಾರಕೀಶ್ ಹೇಳಿದ್ದಾರೆ.