ಮುಂದಿನ ಚುನಾವಣೆಯಲ್ಲಿ ನಾನು ಸೋತರೆ ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ಮನೆಯಲ್ಲಿ ಜೀತಕ್ಕಿರುತ್ತೇನೆ-ಕೆ.ಎನ್.ರಾಜಣ್ಣ

ತುಮಕೂರು, ಶನಿವಾರ, 3 ಫೆಬ್ರವರಿ 2018 (06:33 IST)

ತುಮಕೂರು : ಹಿಂದಿನ  ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಅವರು ಎದುರಾಳಿ ಆಗಿ ನಿಂತಿದ್ದ ವೀರಭದ್ರಯ್ಯನವರು ವಿರುದ್ಧ ಗೆಲುವು ಸಾಧಿಸಿದ್ದು, ಈ ಬಾರಿಯು ವೀರಭದ್ರಯ್ಯನವರು ಕೆ.ಎನ್.ರಾಜಣ್ಣವರಿಗೆ ಪ್ರಬಲ ಎದುರಾಳಿ ಆಗಿ ನಿಂತಿದ್ದ ಹಿನ್ನಲೆಯಲ್ಲಿ ಕೆ.ಎನ್.ರಾಜಣ್ಣ ಅವರು ಬಹಿರಂಗವಾಗಿ  ಸವಾಲು ಹಾಕಿದ್ದಾರೆ.


‘ಮುಂದಿನ ಚುನಾವಣೆಯಲ್ಲಿ ನಾನು ಸೋತರೆ ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ಮನೆಯಲ್ಲಿ ಜೀತಕ್ಕಿರುತ್ತೇನೆ. ವೀರಭದ್ರಯ್ಯ ಸೋತರೆ ನಮ್ಮ ಮನೆಯಲ್ಲಿ ಜೀತಕ್ಕಿರ್ತಾರಾ’ ಎಂದು ಸವಾಲು ಹಾಕಿದ್ದಾರೆ. ‘ಈ ರೀತಿಯ ಸವಾಲು ಮಾಡಲು ಜನರ ಶಕ್ತಿಯೇ ನನಗೆ ಪ್ರೇರಣೆಯಾಗಿದೆ. ಡಿಸಿಸಿ ಬ್ಯಾಂಕ್ ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಒಂದು ವೇಳೆ ಆರೋಪಗಳೆಲ್ಲಾ ಸಾಬೀತಾದರೇ ನಾನು ಜೈಲಿಗೆ ಹೋಗಲು ಸಿದ್ಧನಾಗಿದ್ದೇನೆ. ಸುಮ್ಮನೆ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ ‘ ಎಂದು ಕೆ.ಎನ್.ರಾಜಣ್ಣ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ನಡೆಸಿದ ಯಡಿಯೂರಪ್ಪ

ನಗರದ ಅರಮನೆ ಮೈದಾನದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಭಾಗವಹಿಸುವ ಫೆಬ್ರುವರಿ 4ರ ಕಾರ್ಯಕ್ರಮದ ...

news

ಪ್ರತಿಯೊಂದು ಸಾವಿನಲ್ಲೂ ರಾಜಕೀಯ ಶೋಭೆಯಲ್ಲ– ಖಾದರ್

ಪ್ರತಿಯೊಂದು ಸಾವನ್ನೂ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ರಾಜಕೀಯ ಪಕ್ಷಗಳಿಗೆ ಶೋಭೆ ತರುವುದಿಲ್ಲ ಎಂದು ...

news

ಎಸ್‌.ಎಂ.ಕೃಷ್ಣ, ರಮ್ಯಾ ಯಾರೇ ಬಂದರೂ ನನ್ನ ಸ್ಪರ್ಧೆ ಖಚಿತ– ಅಂಬರೀಶ

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಯಾರೇ ...

news

ಬಿಜೆಪಿ ಹೇಸುವುದಿಲ್ಲ ಎಂದ ದೇವೇಗೌಡ

ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಲುವಾಗಿ ಬಿಜೆಪಿ ಪಕ್ಷದವರು ಏನು ಬೇಕಾದರೂ ಮಾಡುತ್ತಾರೆ ಎಂದು ಜೆಡಿಎಸ್ ...

Widgets Magazine
Widgets Magazine