ಶಾಸಕ ಉಮೇಶ ಜಾಧವ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹೇಳಿದ್ದೇನು?

ಹಾವೇರಿ, ಸೋಮವಾರ, 14 ಜನವರಿ 2019 (17:08 IST)

ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಲಬುರಗಿ ಜಿಲ್ಲೆ ಚಿಂಚೋಳಿ ಮತಕ್ಷೇತ್ರದ ಶಾಸಕ ಡಾ. ಉಮೇಶ ಜಾಧವ್ ನನ್ನ ಸ್ನೇಹಿತರು. ನಾನು ಅವರನ್ನು ಸಂಪರ್ಕ ಮಾಡಿದ್ದೇನೆ. ಅವರು ಕಾಂಗ್ರೆಸ್ ಪಕ್ಷದಲ್ಲಿ ಇರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಹಾವೇರಿಯಲ್ಲಿ ಮಾತನಾಡಿರುವ ಅವರು, ಉಮೇಶ್ ಜಾಧವ ಅವರನ್ನು ಕರೆಯಿಸಿ ಮಾತನಾಡುತ್ತೇನೆ.  ನಮ್ಮದು ದೊಡ್ಡ ಪಕ್ಷವಾಗಿದ್ದು, ಅಸಮಾಧಾನ ಸರ್ವೇ ಸಾಮಾನ್ಯವಾಗಿರುತ್ತದೆ. ಮೈತ್ರಿ ಸರಕಾರ ಸುಭದ್ರವಾಗಿರುತ್ತದೆ ಎಂದು ಹೇಳಿದರು.

ಇನ್ನು ಸರಕಾರದ ಆಡಳಿತದಲ್ಲಿ ಕಾಂಗ್ರೆಸ್ ಹಸ್ತಕ್ಷೇಪ ಮಾಡುತ್ತಿದೆ ಎಂಬ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಯಾವತ್ತೂ ಹಸ್ತಕ್ಷೇಪ ಮಾಡಿಲ್ಲ. ಸಂದರ್ಭ ಬಂದಾಗ ಕೆಲವು, ಸಲಹೆ ಸೂಚನೆಗಳನ್ನು ನೀಡಿದ್ದೇವೆ ಎಂದರು.  





ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆಪರೇಷನ್ ಕಮಲ ಗಾಸಿಪ್ ಎಂದ ಸಂಸದ!

ರಾಜ್ಯ ರಾಜಕೀಯದಲ್ಲಿ ಸಂಕ್ರಾಂತಿಯ ಸಮಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ಆಪರೇಷನ್ ಕಮಲ ಕೇವಲ ಒಂದು ...

news

ರಾಷ್ಟ್ರಪತಿ ಆಡಳಿತ ಜಾರಿ: ಮಾಧ್ಯಮ ಸೃಷ್ಠಿ ಎಂದ ಹೆಚ್.ಡಿ.ಕೆ

ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕ್ಲರ್ಕ್ ಎಂದ ಪ್ರಧಾನಿ ಹೇಳಿಕೆ ಬೆನ್ನಲ್ಲೇ ರಾಜ್ಯದಲ್ಲಿ ...

news

ಮೋದಿ ಆಡಳಿತವನ್ನು ಕೊನೆಗೊಳಿಸುವ ಸಾಮರ್ಥ್ಯವಿರುವ ಏಕೈಕ ಪಕ್ಷ ಯಾವುದು ಗೊತ್ತಾ?

ಲಖನೌ : ಮೋದಿ ಆಡಳಿತವನ್ನು ಕೊನೆಗೊಳಿಸುವ ಸಾಮಾರ್ಥ್ಯವಿರುವ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದು ...

news

ಮಹಿಳೆ ಮಾತಾಡಲಿಲ್ಲವೆಂದು ಪ್ಯಾಂಟ್ ಬಿಚ್ಚಿ ಮರ್ಮಾಂಗ ಪ್ರದರ್ಶನ ಮಾಡಿದ ಕಾಮುಕ ಅರೆಸ್ಟ್

ಬೆಂಗಳೂರು : ಕಾಮುಕನೊಬ್ಬ ಮಹಿಳೆ ಮಾತಾಡಲಿಲ್ಲ ಅಂತ ರಸ್ತೆಯಲ್ಲೆ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ ಘಟನೆ ...

Widgets Magazine