Widgets Magazine

ಖರ್ಗೆ ಕೋಲಾರದಲ್ಲಿ ಸ್ಪರ್ಧೆ?: ಕೆಪಿಸಿಸಿ ಅಧ್ಯಕ್ಷ ಹೇಳಿದ್ದೇನು?

ಚಾಮರಾಜನಗರ| Jagadeesh| Last Modified ಶನಿವಾರ, 16 ಮಾರ್ಚ್ 2019 (13:08 IST)
ಅನಂತಕುಮಾರ ಹೆಗಡೆ ಅತ್ಯಂತ ಕಳಪೆ ಸಂಸದರಾಗಿದ್ದು, ಈ ಬಾರಿ ಅವರನ್ನ ಜನರು ಹೀನಾಯವಾಗಿ ಸೋಲಿಸುತ್ತಾರೆ. ಹೀಗಂತ ಕಾಂಗ್ರೆಸ್ ಪ್ರಮುಖರೊಬ್ಬರು ವ್ಯಂಗ್ಯವಾಡಿದ್ದಾರೆ.

ಉತ್ತರ ಕರ್ನಾಟಕದವರು ಅವರನ್ನ ಮನೆಗೆ ಕಳುಹಿಸುತ್ತಾರೆ. ಅನಂತ್ ಕುಮಾರ್ ಹೆಗಡೆ ಮಾತುಗಳು ದ್ವೇಷವನ್ನ ಸೃಷ್ಡಿಸುತ್ತವೆ. ಉತ್ತರ ಕರ್ನಾಟಕ ಕಾಂಗ್ರೆಸ್ ಮುಕ್ತ ಮಾಡುತ್ತಾರೆನ್ನುವ ಉಡಾಫೆಯ
ಮಾತುಗಳಿಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಹೀಗಂತ ಚಾಮರಾಜನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅಂಬರೀಶ್ ಅವರು ಕಾಂಗ್ರೆಸ್ ನಾಯಕರಾಗಿದ್ದರು, ಹಾಗಾಗಿ ಸುಮಲತ ಜೊತೆ ಮಾತನಾಡುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತಾರೆನ್ನುವುದು ಊಹಾಪೋಹ ಎಂದರು.

ಅವರು ಕಲಬುರಗಿಯಲ್ಲೇ ಸ್ಪರ್ಧೆ ಮಾಡುತ್ತಾರೆ. ಅತೀ ಶೀಘ್ರದಲ್ಲೆ ದೊಡ್ಡ ಸಮಾವೇಶ ನಡೆಯಲಿದೆ ಎಂದರು.
28 ಸಂಸದರಲ್ಲಿ ಹೆಚ್ಚು ಅಂತರದಲ್ಲಿ ಗೆಲ್ಲುವವರು ಆರ್ ಧೃವನಾರಾಯಣ್. ಸಾಕಷ್ಡು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ. ಬಿಜೆಪಿಯಿಂದ ಯಾರೇ ನಿಂತರೂ ಧೃವನಾರಾಯಣ್ ಗೆಲ್ಲುತ್ತಾರೆ ಎಂದರು.

ಇದರಲ್ಲಿ ಇನ್ನಷ್ಟು ಓದಿ :