ಬಿಸಿಯೂಟ ಕಾರ್ಯಕರ್ತೆಯರಿಗೆ ಸಿಎಂ ಸಿದ್ದರಾಮಯ್ಯ ಕೊಟ್ಟ ಭರವಸೆ ಏನು...?

ಬೆಂಗಳೂರು, ಶನಿವಾರ, 10 ಫೆಬ್ರವರಿ 2018 (07:25 IST)

ಬೆಂಗಳೂರು : ಕನಿಷ್ಟ ವೇತನ, ಪಿಎಫ್, ಇಎಸ್‍ಐ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಕೆಲವು ದಿನಗಳಿಂದ ಬಿಸಿಯೂಟ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಯನ್ನು ಸಿಎಂ ಸಿದ್ದರಾಮಯ್ಯ ಅವರ ಭರವಸೆಯ ಮೇರೆಗೆ ಹಿಂಪಡೆಯಲಾಗಿದೆ.


ವಿವಿಧ ಸಂಘಟನೆಗಳ ಮುಖಂಡರ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿ ನಂತರ ‘ವೇತನ ಹೆಚ್ಚಳ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡಲಾಗುವುದು. ಮುಷ್ಕರ ವಾಪಸ್ ಪಡೆದುಕೊಳ್ಳಿ ಎಂದು ಬಿಸಿಯೂಟ ಕಾರ್ಯಕರ್ತೆಯರಲ್ಲಿ ಮನವಿ ಮಾಡಿದ್ದ ಕಾರಣ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.


ವಿವಿಧ ಸಂಘಟನೆಗಳ ಮುಖಂಡರ ಜೊತೆಗಿನ ಮಾತುಕತೆಯಲ್ಲಿ ಕಾರ್ಯಕರ್ತರ ವೇತನವನ್ನು 2,200ರಿಂದ 2,600ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು. ಆದರೆ 3 ಸಾವಿರಕ್ಕೆ ಏರಿಸುವಂತೆ ಮುಖಂಡರು ಮನವಿ ಮಾಡಿದರು. ಈ ಸಭೆಯಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್, ಶಾಲಿನಿ ರಜನೀಶ್‌, ಸಂಘಟನೆಗಳ ಮುಖಂಡರಾದ ರಾಮಚಂದ್ರಪ್ಪ, ವರಲಕ್ಷ್ಮಿ, ಯಮುನಾ ಗಾಂವಕರ್, ಗೋಪಾಲ್ ಹಾಗೂ ಅಧಿಕಾರಿಗಳು ಹಾಜರಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕರ್ನಾಟಕ ಆಗಮಿಸುತ್ತಿರುವ ರಾಹುಲ್‌ ಗಾಂಧಿಗೆ ಬಿಜೆಪಿ ನಾಯಕರು ಮಾಡಿರುವ ವ್ಯಂಗ್ಯದ ಟ್ವೀಟ್ ಇಲ್ಲಿದೆ ನೋಡಿ!

ಬೆಂಗಳೂರು : ವಿಧಾನಸಭೆ ಚುನಾವಣೆ ಹಿನ್ನೆ ಲೆಯಲ್ಲಿ ಪ್ರಚಾರಕ್ಕಾಗಿ ಕರ್ನಾಟಕ ಆಗಮಿಸುತ್ತಿರುವ ಎಪಿಸಿಸಿ ...

news

ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಮಾಡಿಕೊಂಡ ಕಾಂಗ್ರೆಸ್ – ಶೆಟ್ಟರ್

ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪಕ್ಷ ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ವಿಧಾನಸಭೆ ವಿರೋಧ ...

news

ಅಮಿತ್ ಶಾ ಅವರಿಂದ ಹೇಡಿಯಂತಹ ಕೆಲಸ- ದಿನೇಶ್

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶೇಷವಾಗಿ ಅಮಿತ್ ಶಾ ಅವರು ...

news

ರಾಹುಲ್ ಗಾಂಧಿ ಕಾಲಿಟ್ಟರೆ ಕಾಂಗ್ರೆಸ್ ಭಸ್ಮ- ಜನಾರ್ದನ ರೆಡ್ಡಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಸುಟ್ಟು ಭಸ್ಮವಾಗಲಿದೆ ಎಂದು ...

Widgets Magazine
Widgets Magazine