ಮಹೇಶ್ ಗೌಡ-ಉಪೇಂದ್ರ ನಡುವೆ ಭಿನ್ನಾಭಿಪ್ರಾಯಕ್ಕೆ ನಿಜ ಕಾರಣವೇನು? ಪ್ರಿಯಾಂಕಾ ಉಪೇಂದ್ರ ಹೇಳಿದ ಕಾರಣವಿದು!

ಬೆಂಗಳೂರು, ಬುಧವಾರ, 7 ಮಾರ್ಚ್ 2018 (09:01 IST)

ಬೆಂಗಳೂರು: ಕೆಪಿಜೆಪಿ ಪಕ್ಷದಿಂದ ನಟ ಹೊರ ಬಿದ್ದಾಗಿದೆ. ಇದಕ್ಕೆ ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಜತೆಗಿನ ಭಿನ್ನಾಭಿಪ್ರಾಯವೇ ಕಾರಣ ಎನ್ನುವುದು ಗೊತ್ತಾಗಿದೆ.
 
ಈ ಬಗ್ಗೆ ಉಪೇಂದ್ರ ಪತ್ನಿ ಮಾಧ್ಯಮದ ಬಳಿ ಹೇಳಿಕೊಂಡಿದ್ದಾರೆ. ಮಹೇಶ್ ಗೌಡ ನಮ್ಮ ಜತೆ ಚೆನ್ನಾಗಿಯೇ ಇದ್ದರು. ನಮ್ಮ ಮನೆಗೆ ಬಂದು ಊಟ ಮಾಡಿದ್ದರು. ಆದರೆ ಇದ್ದಕ್ಕಿದ್ದ ಹಾಗೇ ಅವರು ಉಪ್ಪಿ ಮೇಲೆ ಹೀಗೆಲ್ಲಾ ಆರೋಪ ಮಾಡುತ್ತಿರುವುದು ಏಕೆ ಗೊತ್ತಾಗುತ್ತಿಲ್ಲ ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.
 
ಅಷ್ಟೇ ಅಲ್ಲ, ಉಪೇಂದ್ರ ಜತೆ ಭಿನ್ನಾಭಿಪ್ರಾಯಗಳಿದ್ದರೆ ಮೊದಲೇ ಹೇಳಬೇಕಿತ್ತು. ಪಕ್ಷಕ್ಕೆ ಹೆಸರು ಬರುವವರೆಗೂ ಉಪೇಂದ್ರ ಬೇಕಿತ್ತು. ಈಗ ತಾನು ಸಂಸ್ಥಾಪಕ ಎಂಬ ಅಹಂ ಅವರಿಗೆ ಬಂದಿದೆ. ಹೆಸರು ಬಂದ ತಕ್ಷಣ ಹೀಗೆಲ್ಲಾ ವರ್ತಿಸುವುದಕ್ಕೆ, ಆರೋಪ ಮಾಡುವುದಕ್ಕೆ ಕಾರಣವೇನು? ಎಂದು ಪ್ರಿಯಾಂಕ ಪ್ರಶ್ನಿಸಿದ್ದಾರೆ.
 
ಇದೇ ವೇಳೆ ಪತಿ ಉಪೇಂದ್ರರ ಹೊಸ ಪಕ್ಷ ಸ್ಥಾಪನೆ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ. ಉಪೇಂದ್ರ ನಿರ್ಧಾರದಿಂದ ಒಳ್ಳೆಯದೇ ಆಗಿದೆ. ಅವರು ತಮ್ಮ ಕನಸನ್ನು ಈ ಮೂಲಕ ಸಾಧಿಸಲಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೈತ್ರಿ ಅಗತ್ಯವೇ ಇಲ್ಲ: ಕುಮಾರಸ್ವಾಮಿಗೆ ಕಿಕ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚುವರಿ ಮತಗಳನ್ನು ಜೆಡಿಎಸ್ ಗೆ ನೀಡಿ ಎಂದು ಸಹಾಯ ...

news

ಮೇಲುಕೋಟೆಯಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಕೆಸ್ ಪುಟ್ಟಣ್ಣಯ್ಯ ಸ್ಥಾನದಲ್ಲಿ ದರ್ಶನ್ ಸ್ಪರ್ಧೆ!

ಮಂಡ್ಯ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮೇಲುಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ದರ್ಶನ್ ...

news

ಬಿಜೆಪಿ, ಕೆಪಿಜೆಪಿ ಬೇಡ ಕಾಂತ.. ನಂದೇ ಪಾರ್ಟಿ ಮಾಡ್ತೀನಿ ಕಾಂತಾ.. ಅಂದರು ಉಪೇಂದ್ರ!

ಬೆಂಗಳೂರು: ಇನ್ನು ಮುಂದೆ ನನಗೂ ನನ್ನ ಬೆಂಬಲಿಗರಿಗೂ ಕೆಪಿಜೆಪಿ ಜತೆ ಯಾವುದೇ ಸಂಬಂಧವಿಲ್ಲ. ನಾವೆಲ್ಲರೂ ...

news

ಅಮೆರಿಕಾದ ಭಾರತೀಯ ದೂತವಾಸದ ಹೆಸರು ಹೇಳಿ ಹಣ ವಸೂಲಿ ಮಾಡಿದ ಮೋಸಗಾರರು

ವಾಷಿಂಗ್ಟನ್‌: ಅಮೆರಿಕದಲ್ಲಿರುವ ಭಾರತೀಯ ದೂತಾವಾಸದ ಹೆಸರಿನಲ್ಲಿ ಅಲ್ಲಿರುವ ಭಾರತೀಯರನ್ನು ಮೋಸಗೊಳಿಸಿರುವ ...

Widgets Magazine
Widgets Magazine