ಪ್ರಧಾನಿ ಮೋದಿ ಬಡವರಿಗಾಗಿ ಏನು ಮಾಡಿದ್ದಾರೆ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಹಾವೇರಿ, ಭಾನುವಾರ, 5 ನವೆಂಬರ್ 2017 (15:37 IST)

ಪ್ರಧಾನಿ ಮೋದಿ ಬಡವರಿಗಾಗಿ ಏನು ಮಾಡಿದ್ದಾರೆ? ಆದಾನಿ, ಅಂಬಾನಿ, ಬಾಬಾ ರಾಮದೇವ್‌ಗೆ ಮಾತ್ರ ಅಚ್ಚೆ ದಿನ್ ಬಂದಿದೆ ಎಂದು ಪ್ರದಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ವಿದೇಶದಲ್ಲಿರುವ ಕಪ್ಪು ಹಣ ತರ್ತಿವಿ ಅಂತಿದ್ದರು, ತಂದ್ರಾ? ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯನ ಖಾತೆಯಲ್ಲಿ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದಿದ್ದರು ಹಾಕಿದ್ರಾ? ಎಂದು ಸಭಿಕರನ್ನು ಪ್ರಶ್ನಿಸಿದರು.
 
ಮಾಜಿ ಸಿಎಂ ಜೈಲಿಗೆ ಹೋಗಿ ಬಂದಿದ್ದಾರೆ. ಗುಜರಾತ್‌ನಲ್ಲಿ ಅಮಿತ್ ಶಾ ಜೈಲಿಗೆ ಹೋಗಿ ಬಂದಿದ್ದಾರೆ. ತಾವು ಮಾಡಿದ್ದನ್ನು ನನಗೆ ಹೋಲಿಕೆ ಮಾಡುತ್ತಿದ್ದಾರೆ. ಅವರಿಗೆ ಪ್ರತಿಯೊಬ್ಬರು ಭ್ರಷ್ಟರಂತೆ ಕಾಣುತ್ತಾರೆ ಎಂದು ಕಿಡಿಕಾರಿದ್ದಾರೆ.
 
ನವೆಂಬರ್ 7 ಕ್ಕೆ ನೋಟ್ ಬ್ಯಾನ್ ಆಗಿ ಒಂದು ವರ್ಷವಾಯಿತು. ಕಪ್ಪು ಹಣ ವಿದ್ದವರ ನಿದ್ದೆಗೆಡಿಸ್ತಿವಿ ಎಂದು ಹೇಳಿದ್ದರು. ಕಪ್ಪುಹಣವಿದ್ದವರು ನಿದ್ದೆಗೆಡಲಿಲ್ಲ. ಸಾಯಲಿಲ್ಲ. ಹಾಗಾದ್ರೆ ಕಪ್ಪು ಹಣ ಎಲ್ಲಿ ಹೋಯಿತು ಮೋದಿಯವರೇ ಎಂದು ತಿರುಗೇಟು ನೀಡಿದ್ದಾರೆ.
 
ಬಿಜೆಪಿ ಪರಿವರ್ತನೆ ಯಾತ್ರೆಗೆ ಬಿಜೆಪಿ ಮುಖಂಡರು ಎಷ್ಟೇ ದುಡ್ಡು ಕೊಟ್ಟರೂ ಜನ ಬರಲಿಲ್ಲ. ಯಾಕೆಂದರೆ ಜನತೆ ಕಾಂಗ್ರೆಸ್ ಸರಕಾರದ ಪರವಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮುಂದಿನ ಚುನಾವಣೆಯಲ್ಲಿ ಗೆಲುವು ನಮ್ಮದೆ: ಕುಮಾರಸ್ವಾಮಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಜಯಗಳಿಸಿ ಅಧಿಕಾರದ ಗದ್ದುಗೆ ಹಿಡಿಯಲಿದೆ ...

news

ದರ ಏರಿಕೆ ನಿಯಂತ್ರಿಸಿ ಉದ್ಯೋಗ ಸೃಷ್ಟಿಸದಿದ್ರೆ ರಾಜೀನಾಮೆ ನೀಡಿ: ಮೋದಿಗೆ ರಾಹುಲ್ ಟಾಂಗ್

ವಡೋದರಾ: ಅಗತ್ಯ ವಸ್ತುಗಳ ದರ ಏರಿಕೆ ನಿಯಂತ್ರಣ ಮತ್ತು ಜನರಿಗೆ ಉದ್ಯೋಗಗಳನ್ನು ಸೃಷ್ಟಿ ಮಾಡಲು ...

news

ಶಾಸಕ ಸಿ.ಪಿ.ಯೋಗೇಶ್ವರ್‌ರಷ್ಟು ದೊಡ್ಡ ಶಕ್ತಿ ನನಗಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು: ತಾಕತ್ತಿದ್ರೆ ನನ್ನ ವಿರುದ್ಧ ಸ್ಪರ್ಧಿಸಲಿ ಎನ್ನುವ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ...

news

2019ರಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ: ಜಿ.ಟಿ.ದೇವೇಗೌಡ

ಮೈಸೂರು: 2019ರಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ ಎಂದು ...

Widgets Magazine
Widgets Magazine