Widgets Magazine

ಮಹಿಳೆಯ ಸಾವಿಗೆ ಏನು ಕಾರಣ ಆಯ್ತು?

ಚಿಕ್ಕಮಗಳೂರು| Jagadeesh| Last Modified ಶನಿವಾರ, 16 ಮಾರ್ಚ್ 2019 (17:10 IST)
ಮಹಿಳೆಯೊಬ್ಬರ ಮೈ ಮೇಲೆ ಟಿಪ್ಪರ್ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಕೂಟರ್ ಸವಾರನೊಬ್ಬ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಸ್ಕೂಟರ್ಗೆ ಡಿಕ್ಕಿ ಹೊಡೆದು ಮಹಿಳೆ ಮೇಲೆ ಟಿಪ್ಪರ್ ಹರಿದಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ನೋಡ ನೋಡ್ತಿದ್ದಂತೆ ಟೈರ್ ನ ಅಡು ಸಿಲುಕಿದ್ದ ಮಹಿಳೆ ಕೊನೆಯುಸಿರು ಎಳೆದಿದ್ದಾರೆ.

ಚಿಕ್ಕಮಗಳೂರು ನಗರದ ಶೃಂಗಾರ್ ಸರ್ಕಲ್ ನಲ್ಲಿ ನಡೆದ ಘಟನೆ ಇದಾಗಿದೆ. ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿಗೆ ಡಿಕ್ಕಿ ಹೊಡೆದಿದ್ದ ಟಿಪ್ಪರ್ ಲಾರಿಯ ಟೈರಿನಡಿ ಸಿಲುಕಿದ್ದ ಲಕ್ಷ್ಮೀ (48) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೊಚ್ಚಿಗೆದ್ದ ಸ್ಥಳೀಯರಿಂದ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಲಾರಿ ಚಾಲಕನನ್ನ ಪೊಲೀಸರಿಗೆ ಒಪ್ಪಿಸಿದರು. ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :