ತುಂಬೆ ವೆಂಟೆಡ್ ಡ್ಯಾಂಗೆ ಏನಾಗಿದೆ?

ಮಂಗಳೂರು, ಭಾನುವಾರ, 28 ಏಪ್ರಿಲ್ 2019 (15:09 IST)


ತುಂಬೆ ವೆಂಟೆಡ್ ಡ್ಯಾಂ ನೋಡಲು, ಸಚಿವರು, ಶಾಸಕರು, ಅಧಿಕಾರಿಗಳು ದೌಡಾಯಿಸಿದ್ದಾರೆ.

ಯು.ಟಿ. ಖಾದರ್, ಎಂಎಲ್ ಸಿ ಐವನ್ ಡಿಸೋಜಾ, ಮಾಜಿ ಶಾಸಕ ಜೆ.ಆರ್.ಲೋಬೋ ಮತ್ತಿತರರು
ತುಂಬೆ ಡ್ಯಾಂನ ನೀರಿನ ಮಟ್ಟ ವೀಕ್ಷಿಸಿದರು.

ಮಂಗಳೂರಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚನೆಯನ್ನು ನೀಡಿದ್ರು. ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ತುಂಬೆ ಡ್ಯಾಂ ನೀರಿನ ಮಟ್ಟ ಕಡಿಮೆಯಾಗಿದೆ.

ದ.ಕ.ಜಿಲ್ಲಾಡಳಿತ, ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದ್ರು. ತಾಲೂಕು ಮಟ್ಟದಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ಇಡಲಾಗಿದೆ. ಜನರಿಗೆ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ನೀತಿ ಸಂಹಿತೆ ಇರುವುದರಿಂದ ನಮ್ಮ ಕಾರ್ಯ ವಿಳಂಬವಾಗಬಹುದು. ಎಲ್ಲಿ ಅನಿವಾರ್ಯತೆ ಇದೆ ಅಲ್ಲಿ ಬೋರ್ ವೆಲ್ ವ್ಯವಸ್ಥೆ ಮಾಡಬೇಕು.

ಟ್ಯಾಂಕರ್ ಮೂಲಕ ಹಳ್ಳಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದರು. ಕಳೆದ ಸಲ ಮಡಿಕೇರಿಯಲ್ಲಿ ಅವಘಡ ಉಂಟಾಗಿತ್ತು. ಸಂಪಾಜೆ ಭಾಗದ ಜನರಿಗೆ ಜಾಗೃತೆಯಿಂದ ಇರಬೇಕೆಂದು ತುಂಬೆಯಲ್ಲಿ ಸಚಿವ ಯು.ಟಿ. ಖಾದರ್ ಹೇಳಿದ್ರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೃಷ್ಣೆಗೆ ಹರಿದು ಬಂದ ಜೀವಜಲ: ಜನರು ಮಹಾ ಖುಷ್

ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿದು ಬಂದಿರುವುದು ಗಡಿ ಪ್ರದೇಶದ ಜನರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

news

ಗಡಿಯಲ್ಲಿ ನಡದೇ ಬಿಡ್ತು ಬಾಲ್ಯ ವಿವಾಹ

ರಾಜ್ಯದಲ್ಲಿ ಇನ್ನೂ ನಿಂತಿಲ್ಲ ಬಾಲ್ಯ ವಿವಾಹ ಎನ್ನುವುದಕ್ಕೆ ಮತ್ತೆ ಸಾಕ್ಷಿಗಳು ದೊರಕುತ್ತಿವೆ.

news

ರಾಹುಲ್ ಗಾಂಧಿಯ ಹೆಸರು ಪ್ರಧಾನಿ ಹುದ್ದೆಯ ಲಿಸ್ಟ್ ನಲ್ಲಿ ಇಲ್ಲ- ಶರದ್ ಪವಾರ್ ರಿಂದ ಅಚ್ಚರಿಯ ಹೇಳಿಕೆ

ನವದೆಹಲಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಹೆಸರು ಪ್ರಧಾನಿ ಹುದ್ದೆಯ ಲಿಸ್ಟ್ ನಲ್ಲಿ ಇಲ್ಲ ಎಂದು ಎನ್ ...

news

ಕಾರ್ಮಿಕರಿಗೊಂದು ಸಿಹಿಸುದ್ದಿ; ಖಾಸಗೀ ವಲಯದ ಕಾರ್ಮಿಕರ ನಿವೃತ್ತಿಯ ವಯಸ್ಸು ಏರಿಕೆ

ಬೆಂಗಳೂರು : ವಿವಿಧ ಸ್ಥರದ ಖಾಸಗೀ ವಲಯದ ಕಾರ್ಮಿಕರ ನಿವೃತ್ತಿಯ ವಯಸ್ಸನ್ನು ಏರಿಕೆ ಮಾಡುವುದರ ಮೂಲಕ ಇದೀಗ ...

Widgets Magazine