ವರ್ಗಾವಣೆ ನಂತರ ಎಲ್ಲಿ ಹೋದರು ಡಿಐಜಿ ರೂಪ?

Bangalore, ಬುಧವಾರ, 19 ಜುಲೈ 2017 (09:09 IST)

ಬೆಂಗಳೂರು: ಕಾರಾಗೃಹ ಇಲಾಖೆಯ ಡಿಐಜಿ ಪೋಸ್ಟ್ ನಿಂದ ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿ ರೂಪಾ ಈಗ ಸಂಚಾರ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಡಿಐಜಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.


 
ಈ ಮೊದಲು ರೂಪಾ ಇದ್ದ ಸ್ಥಾನಕ್ಕೆ ಎಚ್.ಎಸ್. ರೇವಣ್ಣ ಬಂದಿದ್ದಾರೆ. ನಿನ್ನೆಯೇ ಅಧಿಕಾರ ಸ್ವೀಕರಿಸಿದ ರೂಪಾ ತಕ್ಷಣ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ. ಐಪಿಎಸ್ ರೂಪಾ ಅವರೊಂದಿಗೆ ಚರ್ಚಿಸಿದ ಬಳಿಕ ರೂಪಾಗೆ ವರ್ಗಾವಣೆ ಆದೇಶ ನೀಡಿರುವುದು ಶಿಕ್ಷೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಹೊಸ ಪದವಿ ಸ್ವೀಕರಿಸಿದ ಬಳಿಕ ಮಾತನಾಡಿದ ಡಿಐಜಿ ರೂಪಾ ಪೊಲೀಸ್ ಇಲಾಖೆಯಲ್ಲಿ ಯಾವುದೂ ಕೆಟ್ಟ ಇಲಾಖೆ, ಒಳ್ಳೆಯ ಇಲಾಖೆ ಎಂದಿಲ್ಲ.  ವರ್ಗಾವಣೆಯನ್ನು ನನಗೆ ಸಿಕ್ಕಿದ ಶಿಕ್ಷೆ ಎಂದು ಪರಿಗಣಿಸುವುದೇ ಇಲ್ಲ. ಸರ್ಕಾರಿ ಕೆಲಸದಲ್ಲಿ ಇದೆಲ್ಲಾ ಮಾಮೂಲಿ ಎಂದುಕೊಂಡಿದ್ದೇನೆ ಎಂದಿದ್ದಾರೆ. ಇದೇ ವೇಳೆ ಈ ಎಲ್ಲಾ ಪ್ರಹಸನಗಳ ಸಂದರ್ಭದಲ್ಲಿ ತಮಗೆ ಬೆಂಬಲ ನೀಡಿದ ಹಿರಿಯ ಐಪಿಎಸ್ ಅಧಿಕಾರಿ, ಪಾಂಡಿಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಗೆ ಧನ್ಯವಾದ ತಿಳಿಸಲು ಅವರು ಮರೆಯಲಿಲ್ಲ.
 
ಇದನ್ನೂ ಓದಿ..  ಆಪಲ್ ನ ಬೀಜ ತಿಂದರೆ ಜೀವಕ್ಕೇ ಕುತ್ತು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಡಿಐಜಿ ರೂಪಾ ಕಾರಾಗೃಹ ಇಲಾಖೆ ಕರ್ನಾಟಕ ಪೊಲೀಸ್ ರಾಜ್ಯ ಸುದ್ದಿಗಳು Dig Roopa Karnataka Police Parappana Agrahara Jail

ಸುದ್ದಿಗಳು

news

ಸೌದಿ ಅಧಿಕಾರಿಗಳಿಗೆ ಸವಾಲಾದ ಮಿನಿ ಸ್ಕರ್ಟ್ ಹುಡುಗಿ

ಸೌದಿಯ ಐತಿಹಾಸಿಕ ಕೋಟೆಯೊಂದರಲ್ಲಿ ಮಿನಿ ಸ್ಕರ್ಟ್ ಧರಿಸಿರುವ ಮಾಡೆಲ್ ಓಡಾಡುತ್ತಿರುವ ವಿಡಿಯೋ ಸ್ನಾಪ್ ಚಾಟ್ ...

news

(Viral Video) ಎಣ್ಣೆ ಹೊಡೆದಿದ್ದ ಪೈಲಟ್: ಗಿರಕಿ ಹೊಡೆದು ಕೆರೆಗೆ ಬಿದ್ದ ವಿಮಾನ

4 ಸೀಟಿನ ವಿಮಾನವೊಂದು ಗಿರಕಿ ಹೊಡೆಯುತ್ತಾ ಕೆರೆಗೆ ಬಿದ್ದಿರುವ ಘಟನೆ ಸೈಬೀರಿಯಾದಲ್ಲಿ ನಡೆದಿದೆ. ...

news

ಕಾರಾಗೃಹದಲ್ಲಿ ಚೂಡಿದಾರ್ ಧರಿಸಿ ಓಡಾಡುತ್ತಿರುವ ಶಶಿಕಲಾ..!

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಅಣ್ಣಾಡಿಎಂಕೆ ನಾಯಕಿ ವಿ.ಕೆ. ಶಶಿಕಲಾಗೆ ವಿಶೇಷ ಸೌಲಭ್ಯ ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಸಾಮ್ರಾಜ್ಯ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆಣ್ಣಾಡಿಎಂಕೆ ನಾಯಕಿ ...

Widgets Magazine