ಬನ್ನೇರುಘಟ್ಟ ಜೈವಿಕ ಉದ್ಯಾನವನದ ಬಿಳಿ ಹುಲಿ ಸಾವು

ಬನ್ನೇರುಘಟ್ಟ, ಗುರುವಾರ, 21 ಸೆಪ್ಟಂಬರ್ 2017 (11:43 IST)

Widgets Magazine

ಜೈವಿಕ ಉದ್ಯಾನವನದಲ್ಲಿ ಬೆಂಗಾಲ್ ಟೈಗರ್ ಜೊತೆಗಿನ ಕಾದಾಟದಲ್ಲಿ ಗಾಯಗೊಂಡಿದ್ದ ಬಿಳಿ ಹುಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ.   


ಕಳೆದ ಮೂರು ದಿನಗಳ ಹಿಂದೆ ಜೈವಿಕ ಉದ್ಯಾನವನದ ಸಫಾರಿ ಪಾರ್ಕ್`ನಲ್ಲಿ ಬೆಂಗಾಳಿ ಟೈಗರ್ ಮತ್ತು ಬಿಳಿ ಟೈಗರ್ ನಡುವೆ ಕಾದಾಟ ನಡೆದಿತ್ತು.  ಬೆಂಗಾಳಿ ಟೈಗರ್ ಮತ್ತು ಬಿಳಿ ಟೈಗರ್ ಬೇರೆ ಬೇರೆ ಫೆನ್ಸಿಂಗ್`ಗಳಲ್ಲಿ ಇರುತ್ತಿದ್ದವು. ಆದರೆ, ಸಫಾರಿ ವೇಳೆ ನೌಕರನ ಅನನುಭವದಿಂದ ಬಿಳಿ ಹುಲಿ, ಬೆಂಗಾಳಿ ಹುಲಿಗಳಿದ್ದ ಪ್ರದೇಶಕ್ಕೆ ಹೋಗಿತ್ತು. ಈ ಸಂದರ್ಭ ಎರಡು ಬೆಂಗಾಳಿ ಹುಲಿಗಳು ಬಿಳಿ ಹುಲಿ ಮೇಲೆ ಎರಗಿದ್ದವು. ಒಂದು ಗಂಟೆ ನಡೆದ ಕಾಳಗದಲ್ಲಿ ಬಿಳಿ ಹುಲಿ ಬೆನ್ನು ಹುರಿ ಮತ್ತು ಕುತ್ತಿಗೆಗೆ ಗಂಭೀರ ಗಾಯವಾಗಿತ್ತು.

ಮೂರು ದಿನಗಳಿಂದ ಹುಲಿಗೆ ಚಿಕಿತ್ಸೆ ನೀಡಲಾಗಿದ್ದರೂ ಚಿಕಿತ್ಸೆ ಫಲಿಸದೇ ಹುಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಕಾಡಿನಲ್ಲಿ ತೋಡಿದ್ದ ಗುಂಡಿಗೆ ಬಿದ್ದು, ಚಿರತೆಯೊಂದು ಸಾವನ್ನಪ್ಪಿದ್ದು, ಇದೀಗ, ಹುಲಿಯೊಂದು ಮೃತಪಟ್ಟಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿದ್ಧಗಂಗಾ ಶ್ರೀಗಳಿಗೆ ಅನಾರೋಗ್ಯ: ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಶ್ರೀಗಳನ್ನ ...

news

ಪ್ರಧಾನಿ ಮೋದಿ ಸರ್ಕಾರ ಭಾರತದ ಮಾನ ಹರಾಜು ಹಾಕುತ್ತಿದೆ: ರಾಹುಲ್ ಗಾಂಧಿ

ನವದೆಹಲಿ: ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ಮೋದಿ ...

news

ಬೆಳ್ಳಂ ಬೆಳಗ್ಗೆ ಎಸ್.ಎಂ. ಕೃಷ್ಣ ಅಳಿಯನಿಗೆ ಐಟಿ ಶಾಕ್

ಮಾಜಿ ಮುಖ್ಯಮಂತ್ರಿ ಎಸ್`.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಒಡೆತನದ ಎಬಿಸಿ ಕಂಪನಿಗೆ ಸೇರಿದ ಕಾಫಿ ಡೇಗಳ ...

news

ಅಮೆರಿಕಾ ಅಧ್ಯಕ್ಷರ ಹೇಳಿಕೆ ನಾಯಿ ಬೊಗಳಿದಂತೆ ಎಂದ ಉತ್ತರ ಕೊರಿಯಾ

ನವದೆಹಲಿ: ಅಮೆರಿಕಾ ಮತ್ತು ಉತ್ತರ ಕೊರಿಯಾ ನಡುವೆ ಮಾತಿನ ಯುದ್ಧ ಜೋರಾಗಿದೆ. ಉತ್ತರ ಕೊರಿಯಾವನ್ನು ನಾಶ ...

Widgets Magazine