ರಾಹುಲ್ ಗಾಂಧಿ ಬಗ್ಗೆ ಮಾತನಾಡಲು ಶೋಭಾ ಯಾರು?: ಪರಮೇಶ್ವರ್ ಆಕ್ರೋಶ

ಕಲಬುರಗಿ, ಮಂಗಳವಾರ, 11 ಜುಲೈ 2017 (15:21 IST)

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಬಚ್ಚಾ ಎಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಜಿ.ಪರಮೇಶ್ವರ್, ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡಲು ಶೋಭಾ ಯಾರು? ಎಂದು ಗುಡುಗಿದ್ದಾರೆ. 
 
ಎಐಸಿಸಿ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ದೊಡ್ಡ ಲೀಡರ್, ಭವಿಷ್ಯದ ಪ್ರಧಾನಮಂತ್ರಿಯಾಗಲಿರುವ ನಾಯಕರು. ಅಂತಹ ನಾಯಕರ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ.
 
ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ನೈತಿಕತೆಯಿಲ್ಲ. ಮನಬಂದಂತೆ ಹೇಳಿಕೆ ನೀಡುವುದೇ ಬಿಜೆಪಿ ನಾಯಕರ ವೃತ್ತಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
 
ಕೆಲ ದಿನಗಳ ಹಿಂದೆ ಸಂಸದೆ ಶೋಭಾ ಕರಂದ್ಲಾಜೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಬಚ್ಚಾ. ಪ್ರಧಾನಿ ಮೋದಿಯನ್ನು ಟೀಕಿಸಲು ಅವರಿಗೆ ಯಾವ ಅರ್ಹತೆಯಿದೆ ಎಂದು ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ರಾಹುಲ್ ಗಾಂಧಿ ಶೋಭಾ ಕರಂದ್ಲಾಜೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ Rahul Gandhi Shobha Karandlaje Kpcc President G.parameshwar

ಸುದ್ದಿಗಳು

news

ಕೆಂಪಯ್ಯನ ಮೂಲಕವೇ ಎಲ್ಲಾ ಮಾಡ್ಸಿ: ಕರಂದ್ಲಾಜೆ ಲೇವಡಿ

ಕಲಬುರಗಿ: ಮಂಗಳೂರಿನ ಗಲಭೆ ನಿಯಂತ್ರಣಕ್ಕೆ ಉಸ್ತುವಾರಿಯಾಗಿ ಕೆಂಪಯ್ಯನವರನ್ನು ವಹಿಸಲಾಗುವುದು ಎನ್ನುವ ಸಿಎಂ ...

news

ಬಿಜೆಪಿಯವರು ಸುಮ್ಮನಿದ್ರೆ ಎಲ್ಲಾ ಗಲಾಟೆಗಳು ನಿಲ್ಲುತ್ತವೆ: ಸಿಎಂ ತಿರುಗೇಟು

ಬೆಂಗಳೂರು: ಮಂಗಳೂರಿನಲ್ಲಿ ಗಲಾಟೆ ಮಾಡುವವರು ಬೇರೆ ಕಡೆಯಿಂದ ಬಂದವರಲ್ಲ. ಗಲಾಟೆ ಮಾಡುವವರು ನಮ್ಮಲ್ಲಿಯೇ ...

news

ಅಮರ್‌ನಾಥ್ ಯಾತ್ರಿಕರ ದಾಳಿಯ ವೇಳೆ ರಕ್ಷಕನಾಗಿ ಬಂದ ಪುಣ್ಯಾತ್ಮ ಯಾರು ಗೊತ್ತಾ?

ಅಹ್ಮದಾಬಾದ್: ಅಮರ್‌ನಾಥ್ ಯಾತ್ರಿಗಳು ಪ್ರಯಾಣಿಸುತ್ತಿದ್ದ ಬಸ್ ಚಾಲಕ ಸಲೀಂ ಬುದ್ಧಿವಂತಿಕೆಯಿಂದ ವರ್ತಿಸದೆ ...

news

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್, ಬಿಜೆಪಿ ಮ್ಯಾಚ್ ಫಿಕ್ಸಿಂಗ್: ಕುಮಾರಸ್ವಾಮಿ

ಬೆಂಗಳೂರು: ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮು ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಒನ್ ಡೇ ಮ್ಯಾಚ್ ...

Widgets Magazine