Widgets Magazine

ಸಂಸದ ವಿ. ಶ್ರೀನಿವಾಸ್ ಪ್ರಸಾದ್ ವಿರುದ್ಧ ಜನರು ಕಿಡಿಕಾರಿದ್ದೇಕೆ?

ಚಾಮರಾಜನಗರ| pavithra| Last Modified ಸೋಮವಾರ, 12 ಆಗಸ್ಟ್ 2019 (11:26 IST)
: ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ವಿರುದ್ಧ ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಬಹುತೇಕ ಗ್ರಾಮಗಳು ಪ್ರವಾಹ ಎದುರಿಸುತ್ತಿವೆ. ಆದರೆ ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಮಾತ್ರ ಈವರೆಗೂ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಜನರ ಸಂಕಷ್ಟ ಆಲಿಸಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ಜನರು ಸಾಮಾಜಿಕ  ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.


ಸ್ವಾಭಿಮಾನಿ ಸಂಸದರೇ, ಎಲ್ಲಿದ್ದೀರಾ? ಯಾರಾದರೂ ಸಂಸದರನ್ನ ಹುಡುಕಿ ಕೊಡಿ ಮತಗಳನ್ನು ಪಡೆದು ಜನರ ಕಷ್ಟ ಕಾಲದಲ್ಲಿ ಕಾಣೆಯಾಗಿದ್ದಾರೆ. ಸಂಸದರನ್ನು ಹುಡುಕಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಬರೆದು ತಮ್ಮ ಜಲಾವೃತಗೊಂಡ ಗ್ರಾಮಗಳ ಕೆಲ ಫೋಟೋಗಳನ್ನು ಹಾಕಿ ಅಪ್ಲೋಡ್ ಮಾಡಿ ಕಿಡಿಕಾರಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :