Widgets Magazine
Widgets Magazine

ಪ್ರತಿ ಬಾರಿ ಏಕೆ ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್ ಧಕ್ಕೆ ತರುತ್ತಿದೆ?-ಯಡಿಯೂರಪ್ಪ

ಬೆಂಗಳೂರು, ಮಂಗಳವಾರ, 13 ಫೆಬ್ರವರಿ 2018 (10:40 IST)

Widgets Magazine

ಬೆಂಗಳೂರು : ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂಚರಿಸುವ ಮಾರ್ಗದಲ್ಲಿ ಬರುವ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದ ಹಿನ್ನಲೆಯಲ್ಲಿ ಮಾಂಸಾಹಾರ ತಿಂದು ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಬಿ.ಎಸ್ ಯಡಿಯೂರಪ್ಪ ಅವರು ಆರೋಪಿಸಿದ್ದಾರೆ.


ಮೀನು ತಿಂದು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯೋ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೆಡೆಯಾದರೆ, ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿಯ ದರ್ಶನ ಪಡೆಯೋ ರಾಹುಲ್ ಗಾಂಧಿ ಮತ್ತೊಂದು ಕಡೆ. ಪ್ರತಿ ಬಾರಿ ಏಕೆ ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್ ಧಕ್ಕೆ ತರುತ್ತಿದೆ? ಎಲ್ಲರನ್ನೂ ಸಮನಾಗಿ ಕಾಣುವುದು ಸಮಾಜವಾದ, ನಿಮ್ಮದು ಮಜಾವಾದ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.


ರಾಹುಲ್ ಗಾಂಧಿ ಕೊಪ್ಪಳ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ತೆರಳುವ ಮುನ್ನ ಪ್ರವಾಸಿ ಮಂದಿರದಲ್ಲಿ ಜವಾರಿ ಕೋಳಿ, ಬಿರಿಯಾನಿ, ಪಾವ್ ಬಾಜಿ, ಶಾವಿಗೆ ಪಾಯಸ, ಪಿಜ್ಜಾ ಸೇರಿದಂತೆ ವಿವಿಧ ವೆಜ್ ಮತ್ತು ನಾನ್‍ವೆಜ್ ಆಹಾರ ಸೇವನೆ ಮಾಡಿದ್ದರು ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ದೇಶದ 6ನೇ ಶ್ರೀಮಂತ ಸಿಎಂ ಎಂದೆನಿಸಿಕೊಂಡ ಸಿದ್ದರಾಮಯ್ಯ

ನವದೆಹಲಿ : ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆ (ಎಡಿಆರ್‌) ದೇಶದ 29 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ...

news

ಮಹದಾಯಿ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು-ಜಯಮಾಲಾ

ಬೆಂಗಳೂರು : ಮಹದಾಯಿ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡೆ, ಚಿತ್ರನಟಿ ಜಯಮಾಲಾ ...

news

ಅನಂತಕುಮಾರ್ ಹೆಗಡೆಗೆ ಬುದ್ದಿ ಹೇಳಿದ ಯಡಿಯೂರಪ್ಪ

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುದ್ದಿ ಅವರು ...

news

ಸಚಿವೆ ಉಮಾಭಾರತಿ ಚುನಾವಣೆಯಿಂದ ದೂರ ಉಳಿಯಲು ಕಾರಣವೇನು ಗೊತ್ತಾ…?

ಉತ್ತರಪ್ರದೇಶ : ಅನಾರೋಗ್ಯದ ಕಾರಣದಿಂದ ಚುನಾವಣಾ ಸ್ಪರ್ಧೆಯಿಂದ ದೂರ ಉಳಿಯಲು ಕೇಂದ್ರ ಕುಡಿಯುವ ನೀರು, ...

Widgets Magazine Widgets Magazine Widgets Magazine