ಮೈಸೂರು: ಮಹದಾಯಿ ನೀರಿಗಾಗಿ ಇಂದು ಕರ್ನಾಟಕ ಬಂದ್ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿಗೂ ಬಂದ್ ನ ಬಿಸಿ ತಟ್ಟಿತ್ತು. ಬಸ್ ವ್ಯವಸ್ಥೆ ಇಲ್ಲದೇ, ಜನ ಪರದಾಡುತ್ತಿದ್ದರು. ಈ ಹಿನ್ನೆಲೆ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ ಬಸ್ ಯಾಕೆ ನಿಲ್ಲಿಸಿದ್ದೀರಿ…? ಎಂದು ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನೆ ಕೇಳಿದ್ದಾರೆ.