ಪದ್ಮಶ್ರೀ ಬೇಡವೆಂದು ಸಿದ್ದೇಶ್ವರ ಸ್ವಾಮೀಜಿ ಮೋದಿಗೆ ಪತ್ರ ಬರೆದಿದ್ದು ಯಾಕೆ?

ವಿಜಯಪುರ, ಶನಿವಾರ, 27 ಜನವರಿ 2018 (05:56 IST)

: ಗಣರಾಜ್ಯೋತ್ಸವ  ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಮಾಡಿದ್ದು, ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ತಮಗೆ ದೊರೆತ ಪ್ರಶಸ್ತಿಯನ್ನು ಗೌರವಯುತವಾಗಿ ಹಿಂತಿರುಗಿಸುವ ಮನವಿ ಪತ್ರವನ್ನು ಪ್ರಧಾನಿ ಮೋದಿ ಅವರಿಗೆ ಬರೆದಿದ್ದಾರೆ.

 
ತನ್ನನ್ನು ಸಂಪರ್ಕಿಸದೇ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸುತ್ತಾ, ‘ನಾನೊಬ್ಬ ಸಾಮಾನ್ಯ ಆಧ್ಯಾತ್ಮಿಕ ಜೀವಿ, ಅದಕ್ಕಾಗಿ ನಾನು ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ತಾವುಗಳು ಅನ್ಯತ ತಪ್ಪು ಭಾವಿಸಬೇಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿಂದೆಯೂ ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಕೊಡುವುದಾಗಿ ಸ್ವಾಮೀಜಿ ಅವರನ್ನು ಸಂಪರ್ಕಿಸಿದ್ದವು, ಈ ವೇಳೆಯೂ ಅವರು ಪ್ರಶಸ್ತಿಗಳನ್ನು ತಿರಸ್ಕರಿಸಿದ್ದರು. ಈ ವೇಳೆ ಇಂತಹ ಪ್ರಶಸ್ತಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಸಾಧಕರಿಗೆ ನೀಡಿ ಗೌರವಿಸಿ ಎಂದು ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಬ್ಬರು ಮುಖ್ಯಮಂತ್ರಿಗಳನ್ನು ನಿಭಾಯಿಸಲಾಗದ ಪ್ರಧಾನಿ– ಸಚಿವ

ಮಹಾದಾಯಿ ವಿವಾದ ಬಗೆಹರಿಸಲು ಇಬ್ಬರು ಮುಖ್ಯಮಂತ್ರಿಗಳನ್ನು ನಿಭಾಯಿಸಲಾಗದ ಪ್ರಧಾನಮಂತ್ರಿ ದೇಶವನ್ನು ಹೇಗೆ ...

news

ಮಹಿಳೆಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಜಿ.ಪರಮೇಶ್ವರ್‌

ಮೂತ್ರಪಿಂಡ ವೈಫಲ್ಯದಿಂದ ತೊಂದರೆ ಅನುಭವಿಸುತ್ತಿರುವ ಮಹಿಳೆಯೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ...

news

ಯಡಿಯೂರಪ್ಪಗೆ ಜ್ವರ– ಮನೆಯಲ್ಲಿ ವಿಶ್ರಾಂತಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜ್ವರದಿಂದ ಬಳಲುತ್ತಿದ್ದು, ಮನೆಯಲ್ಲಿ ವಿಶ್ರಾಂತಿ ...

news

ದೇವೇಗೌಡ ಬರದಿದ್ದರೆ ಮಹಾ ಮಸ್ತಕಾಭಿಷೇಕ ನಿಂತು ಹೋಗುತ್ತಾ– ಮಂಜು

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಬರದಿದ್ದರೆ ಮಹಾ ಮಸ್ತಕಾಭಿಷೇಕ ನಿಂತು ಹೋಗುತ್ತಾ ಎಂದು ...

Widgets Magazine
Widgets Magazine