ಶಿವರಾಜ್ ಕುಮಾರ್ ತಮ್ಮ ಪತ್ನಿಯನ್ನು ಉಪ ಚುನಾವಣೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದ್ಯಾಕೆ?

ಬೆಂಗಳೂರು, ಭಾನುವಾರ, 14 ಅಕ್ಟೋಬರ್ 2018 (07:37 IST)

ಬೆಂಗಳೂರು : ಲೋಕಸಭಾ ಉಪಚುನಾವಣೆಗೆ ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕೀಳಿಸಲು ನಟ ಶಿವರಾಜ್ ಕುಮಾರ್ ಹಿಂದೇಟು ಹಾಕುತ್ತಿದ್ದಾರಂತೆ.


ಹೌದು ಬಿ.ಎಸ್.ಯಡಿಯೂರಪ್ಪರ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿರುವ ವಿಚಾರ ಈಗಾಗಲೇ ತಿಳಿದಿದೆ. ಹಾಗೇ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಆದಕಾರಣ ಜೆಡಿಎಸ್ ನಿಂದ ಗೀತಾ ಅವರನ್ನು  ಕಣಕ್ಕಿಳಿಸಲು ಮಾಜಿ ಪ್ರಧಾನಿ ದೇವೇಗೌಡರು ಪ್ಲಾನ್ ಮಾಡಿದ್ದರು.


ಆದರೆ ಕಳೆದ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜ್‍ಕುಮಾರ್ ಸ್ಪರ್ಧಿಸಿ ಯಡಿಯೂರಪ್ಪರ ವಿರುದ್ಧ ಸೋಲು ಕಂಡಿದ್ದರು. ಆದಕಾರಣ ಪತ್ನಿ ಗೀತಾ ಅವರನ್ನ ಉಪ ಚುನಾವಣೆಗೆ ನಿಲ್ಲಿಸಲು ಶಿವರಾಜ್‍ಕುಮಾರ್ ಹಿಂದೇಟು ಹಾಕುತ್ತಿದ್ದಾರಂತೆ. ಸಿಎಂ ಕುಮಾರಸ್ವಾಮಿ ಅವರ ಬಳಿ ಯಾವುದೇ ಕಾರಣಕ್ಕೂ ಬೈ ಎಲೆಕ್ಷನ್ ಬೇಡ. ಈ ಮೊದಲೇ ನಾವು ಅನುಭವಿಸಿದ್ದು ಸಾಕು, ನಮಗೆ ಎಲೆಕ್ಷನ್ ಸಹವಾಸ ಬೇಡ. ಮಧು ಬಂಗಾರಪ್ಪ ಸ್ಪರ್ಧೆ ಮಾಡೋದಾದರೆ ನಾವು ಬಂದು ಪ್ರಚಾರ ಮಾಡುತ್ತೇವೆ. ಆದರೆ ಮಧು ಬಂಗಾರಪ್ಪ ಮನವೊಲಿಸೋದು ನಿಮಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತನ್ನ ಕಾಮದಾಟ ಬಯಲಾಗಬಾರದೆಂದು ಹೆತ್ತ ಮಗನನ್ನೆ ಕೊಂದ ಪಾಪಿ ತಾಯಿ

ಚಾಮರಾಜನಗರ : ಒಬ್ಬ ತಾಯಿ ತಾನು ಹೆತ್ತ ಮಕ್ಕಳಿಗಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದ ಘಟನೆಗಳನ್ನು ...

news

ಕಿಂಗ್ ಪಿನ್ ಉದಯ ವಿರುದ್ಧ ಮತ್ತೊಂದು ಕೇಸ್ ದಾಖಲು

ಕಚೇರಿ ಬಾಡಿಗೆ ಪಡೆದು ಲಕ್ಷ ಲಕ್ಷ ಬಾಡಿಗೆ ಹಣ ನೀಡದೇ ವಂಚನೆ ಮಾಡಿದ್ದ ಕಿಂಗ್ ಪಿನ್ ಉದಯ ವಿರುದ್ಧ ...

news

ವಿದೇಶಾಂಗ ಸಹಾಯಕ ಸಚಿವನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ: ಆರೋಪದ ಪರೀಕ್ಷೆ ಮಾಡುವೆ ಎಂದ ಷಾ

ಕೇಂದ್ರ ಸರಕಾರದ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆರೋಪದ ಕುರಿತು ...

news

ಕಾಂಗ್ರೆಸ್ ನಾಯಕರ ಯಶಸ್ವಿ ಮಾತುಕತೆ: ಅಸಮಧಾನಕ್ಕೆ ಇತಿಶ್ರೀ

ರಾಜ್ಯದ ವಿಧಾನ ಸಭೆ ಹಾಗೂ ಲೋಕಸಭೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ನಲ್ಲಿ ಎದ್ದಿದ್ದ ಅಸಮಧಾನ ಹಾಗೂ ...

Widgets Magazine