ಏನಾಗಿದೆ ನಿಮಗೆ ಕಲಾಪಕ್ಕೆ ಯಾಕೆ ಗೈರು: ಶಾಸಕ, ಸಚಿವರಿಗೆ ಸಿಎಂ ಕ್ಲಾಸ್

ಬೆಂಗಳೂರು, ಬುಧವಾರ, 15 ನವೆಂಬರ್ 2017 (14:18 IST)

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ನಮ್ಮ ಸರಕಾರದ ಕೊನೆಯ ಅಧಿವೇಶನವಾಗಿದೆ. ಆದಾಗ್ಯೂ ಸಚಿವ ಶಾಸಕರು ಕಲಾಪಕ್ಕೆ ಗೈರು ಹಾಜರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ಕಲಾಪಕ್ಕೆ ಗೈರುಹಾಜರಾಗಲು ಏನು ಕಾರಣ? ನಿಮಗೆ ಆಗುತ್ತಿರುವ ತೊಂದರೆಯಾದರೂ ಏನು? ತೊಂದರೆಯನ್ನಾದರೂ ಹೇಳಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಜನಪ್ರತಿನಿಧಿಗಳಾಗಿ ಅಧಿವೇಶನ ನಡೆಯುತ್ತಿರುವ ಕಲಾಪಗಳಿಗೆ ಗೈರುಹಾಜರಾಗುವುದು ಸರಿಯಲ್ಲ. ವಿಪ್ ಜಾರಿಗೊಳಿಸಿದರೂ ಕೂಡಾ ಸದನಕ್ಕೆ ಹಾಜರಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
 
ನಾಳೆಯಿಂದ ಕೂಡಲೇ ಎಲ್ಲಾ ಶಾಸಕರು, ಸಚಿವರು ಕಲಾಪಕ್ಕೆ ಹಾಜರಾಗಿ, ಸಚಿವ ಜಾರ್ಜ್ ಮತ್ತು ಮೂಢನಂಬಿಕೆ ವಿಧೇಯಕವನ್ನು ಬೆಂಬಲಿಸಿ ಎಂದು ಸಿಎಂ ಸಿದ್ದರಾಮಯ್ಯ ಕಟ್ಟಾಜ್ಞೆ ಹೊರಡಿಸಿದ್ದಾರೆ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯ- ಜಗದೀಶ್ ಶೆಟ್ಟರ್ ನಡುವೆ ಟಾಕ್ ಫೈಟ್

ಬೆಂಗಳೂರು: ಮಹದಾಯಿ ಸಮಸ್ಯೆ ಇತ್ಯರ್ಥಿ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕ ಜಗದೀಶ್ ...

news

ಮಹದಾಯಿ ಸಮಸ್ಯೆ ಎತ್ತಲು ಬಿಜೆಪಿ ಶಾಸಕರ ಹಿಂದೇಟು

ಬೆಂಗಳೂರು: ಮಹತ್ವಕಾಂಕ್ಷೆಯ ನೀರಾವರಿ ಯೋಜನೆಯಾದ ಮಹದಾಯಿ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ವಿಪಕ್ಷವಾದ ...

news

ಸಚಿವ ಜಾರ್ಜ್‌ಗೆ ತನಿಖೆಗೆ ಮುನ್ನವೇ ಕ್ಲೀನ್ ಚಿಟ್: ಕುಮಾರಸ್ವಾಮಿ ಕಿಡಿ

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ.ಗಣಪತಿ ಪ್ರಕರಣದಲ್ಲಿ ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಅವರಿಗೆ ...

news

17 ವರ್ಷದ ಯುವತಿಯ ಮೇಲೆ 10 ದಿನ ನಿರಂತರ ಗ್ಯಾಂಗ್‌ರೇಪ್

ಬೆಂಗಳೂರು: ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ 17 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿದ ...

Widgets Magazine
Widgets Magazine