ಕರ್ನಾಟಕದ ಸಮಸ್ಯೆಗೆ ಏಕೆ ಸ್ಪಂದಿಸಲ್ಲ– ಮೋದಿ ಅವರಿಗೆ ಅಂಬರೀಶ ಪ್ರಶ್ನೆ

ಬೆಂಗಳೂರು, ಮಂಗಳವಾರ, 2 ಜನವರಿ 2018 (19:45 IST)

ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಅಲ್ಲಿಗೆ ಹೋಗಿ ನಾನು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಏನಾದರೂ ಆದಾಗ ಏಕೆ ಇಲ್ಲಿಗೆ ಬರಲ್ಲ ಎಂದು ಮಾಜಿ ಸಚಿವ ಹಾಗೂ ನಟ ಅಂಬರೀಶ ಪ್ರಶ್ನೆ ಮಾಡಿದ್ದಾರೆ.
 
ಕರ್ನಾಟಕದಲ್ಲಿ ವಿಕೋಪಗಳು ನಡೆದಾಗ ನರೇಂದ್ರ ಮೋದಿ ಅವರು ಇಲ್ಲಿಗೆ ಬಂದು ಭೇಟಿ ನೀಡಲಿಲ್ಲ. ಯಾಕೆ ಕರ್ನಾಟಕದವರು ಭಾರತೀಯರು ಅಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಸ್ವಾರ್ಥವನ್ನು ಬಿಟ್ಟರೆ ಮಹಾದಾಯಿ ಸಮಸ್ಯೆ ಒಂದು ದಿನದಲ್ಲಿ ಬಗೆಹರಿಯುತ್ತದೆ. ಆದರೆ, ನರೇಂದ್ರ ಮೋದಿ ಅವರು ರಾಜ್ಯದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತ‍ಪಡಿಸಿದ್ದಾರೆ.
 
ನಾವೆಲ್ಲ ಒಂದೇ ದೇಶದ ಪ್ರಜೆಗಳು. ಕೇವಲ ಮದ್ರಾಸಿನವರು ಮಾತ್ರ ಭಾರತೀಯರಲ್ಲ. ನಮಗೂ ಮತ್ತು ಮದ್ರಾಸಿನವರೆಗೂ ಸರಿಯಾದ ಮಾರ್ಗದಲ್ಲಿ ನೀರನ್ನು ಹಂಚಿಕೆ ಮಾಡಿ ಎಂದು ಆಗ್ರಹಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕತ್ತಲು ಮುಕ್ತ ಭಾರತ ನಿರ್ಮಾಣದ ಮೋದಿಯ ಕನಸು ಆಗಲಿದೆಯಾ ನನಸು?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕತ್ತಲು ಮುಕ್ತ ಭಾರತದ ನಿರ್ಮಾಣವು 2019 ರ ಮಾರ್ಚನಲ್ಲಿ ಈಡೇರಲಿದೆ. ...

news

ಮುಸ್ಲಿಂರು ತಮ್ಮ ಪ್ರಾಬಲ್ಯ ಸ್ಥಾಪಿಸಲು ಹೆಚ್ಚು ಮಕ್ಕಳನ್ನು ಹೆರುತ್ತಿದ್ದಾರೆ; ವಿವಾದ ಸೃಷ್ಟಿಸಿದ ಸಿಂಘಾಲ್ ಪೋಸ್ಟ್

ಜೈಪುರ : ಹಿಂದೂಗಳನ್ನು ತಮ್ಮ ದೇಶದಲ್ಲಿ ಮೂಲೆಗುಂಪು ಮಾಡಿ ಮುಸ್ಲಿಂಮರು ತಮ್ಮ ಪ್ರಾಬಲ್ಯ ಸ್ಥಾಪಿಸಲು ...

news

ಮಾನವೀಯ ದೃಷ್ಠಿಯಿಂದ ಮಹಾದಾಯಿ ನೀರು ಹರಿಸಿ– ಅಣ್ಣಾ ಹಜಾರೆ

ಮಾನವೀಯ ದೃಷ್ಠಿಯಿಂದ ಮಹಾದಾಯಿ ನೀರನ್ನು ಉತ್ತರ ಕರ್ನಾಟಕಕ್ಕೆ ಗೋವಾ ಸರ್ಕಾರ ಹರಿಸಬೇಕು ಎಂದು ಹಿರಿಯ ...

news

ಹಾಸನ ಖ್ಯಾತಿ ಹೊಂದಿರುವುದು ದೇವೇಗೌಡ ಹುಟ್ಟಿದ್ದಕ್ಕಲ್ಲ– ನಂಜುಂಡಿ

ಹಾಸನ ಖ್ಯಾತಿ ಹೊಂದಿರುವುದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರು ಹುಟ್ಟಿದ್ದಕ್ಕೆ ಅಲ್ಲ ಎಂದು ...

Widgets Magazine
Widgets Magazine