ವೇಶ್ಯಾವೃತ್ತಿ ಮಾಡೋದಿಲ್ಲ ಎಂದ ಪತ್ನಿಯನ್ನು ಕೊಲೆಗೈದ ಪತಿ!

ಬೆಂಗಳೂರು, ಶನಿವಾರ, 12 ಜನವರಿ 2019 (17:58 IST)

ವೇಶ್ಯಾವೃತ್ತಿ ಮಾಡಲು ನಿರಾಕರಿಸಿದ ಪತ್ನಿಯನ್ನು ಕೊಲೆಗೈದ ಪತಿ ಶವವನ್ನು ಹೊಲದಲ್ಲಿ ಹೂತು ಪರಾರಿಯಾಗಿರುವ ಘಟನೆ ನಡೆದಿದೆ.

ದೊಡ್ಡಬಳ್ಳಾಪುರದ ದುರ್ಗೇಹಳ್ಳಿಯಲ್ಲಿ ಈ ಘಟನೆ ನಡೆದಿದೆ. ದುರ್ಗೇಹಳ್ಳಿಯಲ್ಲಿ ಶ್ರೀನಿವಾಸ್ ಕೊಲೆಗೈದ ಆರೋಪಿ. ದುರ್ಗೇಹಳ್ಳಿಯ ಮಹಿಳೆಯನ್ನೇ ಪ್ರೀತಿಸಿ ಶ್ರೀನಿವಾಸ್ ಎರಡನೇ ಮದುವೆಯಾಗಿದ್ದನು. ಕೆಲವು ದಿನಗಳ ಬಳಿಕ ಶ್ರೀನಿವಾಸ್, ಪತ್ನಿಯನ್ನು ವೈಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸುತ್ತಿದ್ದು ಇದಕ್ಕೆ ಪತ್ನಿ ನಿರಾಕರಿಸುತ್ತಿದ್ದಳು. ಇದೇ ವಿಷಯಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು.

.10 ರಂದು ರಾತ್ರಿ ಸ್ನೇಹಿತರನ್ನು ಮನೆಗೆ ಕರೆಸಿದ ಶ್ರೀನಿವಾಸ್, ಅವರೊಂದಿಗೆ ಸಹಕರಿಸುವಂತೆ ಹೆಂಡತಿಗೆ ಒತ್ತಾಯಿಸಿದ್ದು ಆಕೆ ನಿರಾಕರಿಸಿದ್ದರಿಂದ ಕೋಪಗೊಂಡ ಶ್ರೀನಿವಾಸ್ ಹಲ್ಲೆ ಮಾಡಿ  ಕೊಲೆಗೈದಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಪತ್ನಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಬಳಿಕ ಶವವನ್ನು ತೊಗರಿ ಹೊಲದಲ್ಲಿ ಹೂತು ಅದರ ಮೇಲೆ ತೊಗರಿ ಗಿಡಗಳನ್ನು ಇಟ್ಟು ಪರಾರಿಯಾಗಿದ್ದಾನೆ.

ಕುರಿ ಕಾಯಲು ಹೋದ ಕುರಿಗಾಯಿಗಳಿಗೆ ನಿನ್ನೆ ಮಧ್ಯಾಹ್ನ  ಹುಡುಗರಿಗೆ ತೊಗರಿ ಹೊಲದಲ್ಲಿದ್ದ ಶವ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ  ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ನಂತರ ಶ್ರೀನಿವಾಸ್ ಕುಟುಂಬ ಮನೆಗೆ ಬೀಗ ಹಾಕಿ ತಲೆ ಮರೆಸಿಕೊಂಡಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎ.ಮಂಜು ಆರೋಪಕ್ಕೆ ರೇವಣ್ಣ ಗರಂ ಆಗಿದ್ಯಾಕೆ?

ಹಾಸನದ ಅಭಿವೃದ್ಧಿ ಕಾಂಗ್ರೆಸ್ ಕಾಲದಲ್ಲೇ ಆಗಿತ್ತು. ಹೀಗಂತ ಎ.ಮಂಜು ಆರೋಪಕ್ಕೆ ಸಚಿವ ರೇವಣ್ಣ ಗರಂ ...

news

ಆತ್ಮಹತ್ಯೆಗೆ ಶರಣಾಗಿದ್ದ ಅಂಬಿ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ

ಆತ್ಮಹತ್ಯೆಗೆ ಶರಣಾಗಿದ್ದ ಅಂಬಿ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದೆ. ರೆಬೆಲ್ ಸ್ಟಾರ್ ಅಂಬರೀಷ್ ...

news

1 ಕೋಟಿ ಲಂಚಕ್ಕೆ ಬೇಡಿಕೆ: ಸಿಸಿಬಿ ಸಬ್ಇನ್ಸಪೆಕ್ಟರ್ ಸಸ್ಪೆಂಡ್

ಜನರಿಗೆ ಮೋಸ ಮಾಡಿದ್ದ ಕಂಪನಿ ಬಳಿ 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಿಸಿಬಿಯ ...

news

ಆಪರೇಷನ್ ಕಮಲಕ್ಕೆ ಬಿಜೆಪಿ ಸಜ್ಜು?

ದೆಹಲಿಯಲ್ಲಿ ಆರಂಭವಾಗಿರುವ ಬಿಜೆಪಿಯ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ಶಾಸಕರು ದೆಹಲಿ ...