ಪತ್ನಿಯ ಅನೈತಿಕ ಸಂಬಂಧ ಪ್ರಶ್ನಿಸಿದ ಪತಿ ಫಿನಿಶ್

ಬೆಂಗಳೂರು, ಶನಿವಾರ, 6 ಮೇ 2017 (18:49 IST)

Widgets Magazine

55 ವರ್ಷ ವಯಸ್ಸಿನ ಪತಿ ಮಾನ್‌ಸಿಂಗ್‌‌ನನ್ನು ಪತ್ನಿಯೇ ಪ್ರಿಯಕರನ ಜತೆ ಸೇರಿ ಉಸಿರುಗಟ್ಟಿಸಿ ಹತ್ಯೆಗೈದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
 
ಜೆ.ಸಿ.ನಗರದ ನಿವಾಸಿಯಾಗಿದ್ದ ಚಂದ್ರಬಾಯಿ ತನ್ನ ಪ್ರಿಯಕರ ಅಶೋಕ್‌ನೊಂದಿಗೆ ಸೇರಿ ಪತಿ ಮಾನ್‌ಸಿಂಗ್‌ನನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾಳೆ. ನಂತರ ಶವವನ್ನು ಸಾಗಿಸುವ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾರೆ.
 
44 ವರ್ಷ ವಯಸ್ಸಿನ ಚಂದ್ರಬಾಯಿ ಮತ್ತು 39 ವರ್ಷ ವಯಸ್ಸಿನ ಅಶೋಕ್ ಮಧ್ಯೆ ಅನೈತಿಕ ಸಂಬಂಧವಿತ್ತು. ಸದಾ ಮನೆಗೆ ಬರುತ್ತಿದ್ದ ಅಶೋಕ್ ಬಗ್ಗೆ ಪತಿ ಮಾನ್‌ಸಿಂಗ್ ಪ್ರಶ್ನಿಸಿದ್ದರಿಂದ, ಆತನನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಗಿ ಆರೋಪಿಗಳು ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾರೆ.
 
ಚಂದ್ರಬಾಯಿ ನಡುವಳಿಕೆಯಿಂದ ಅನುಮಾನಗೊಂಡ ನೆರೆಹೊರೆಯವರು ಜೆ.ಸಿ.ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೋಣಿಚೀಲದಲ್ಲಿ ಯಾವುದೋ ವಸ್ತುವನ್ನು ತೆಗೆದುಕೊಂಡು ಸ್ಮಶಾನದತ್ತ ಹೋಗಿದ್ದಾಳೆ ಎನ್ನುವ ವಿವರಣೆ ಪಡೆದ ಪೊಲೀಸರು ಸ್ಮಶಾನಕ್ಕೆ ತೆರಳಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೊನೆಗೂ ಕಾರ್ಯಕಾರಿಣಿಯಲ್ಲಿ ಈಶ್ವರಪ್ಪಗೆ ಗೋಷ್ಠಿ ನಿಗದಿ

ಮೈಸೂರು: ನಗರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೊನೆಗೂ ಈಶ್ವರಪ್ಪಗೆ ...

news

ಜೆಡಿಎಸ್ ಪಕ್ಷ ಸೇರುವತ್ತ ಸಿ.ಎಂ.ಇಬ್ರಾಹಿಂ ಚಿತ್ತ?

ಬೆಂಗಳೂರು: ಪ್ರಕೃತಿ ಚಿಕಿತ್ಸಾಲಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜೆಡಿಎಸ್ ವರಿಷ್ಠ ...

news

ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಈಶ್ವರಪ್ಪಗೆ ಕೆ.ಬಿ ಶಾಣಪ್ಪ ತರಾಟೆ

ಮೈಸೂರು: ದಲಿತ ನಾಯಕ, ಅಸ್ಪಶ್ಯ್ರತೆ ವಿರುದ್ಧ ಹೋರಾಡಿದ ನಾಯಕ ಎಂದು ಯಾಕೆ ಹೇಳುತ್ತೀರಾ? ಬಿಜೆಪಿ ಮುಖಂಡ, ...

news

ಗೃಹ ಸಚಿವ ಸ್ಥಾನಕ್ಕೆ ಜಿ.ಪರಮೇಶ್ವರ್ ರಾಜೀನಾಮೆ ನೀಡಲಿ: ಮುನಿಯಪ್ಪ

ಬೆಂಗಳೂರು: ಗೃಹ ಸಚಿವ ಸ್ಥಾನಕ್ಕೆ ಜಿ.ಪರಮೇಶ್ವರ್ ರಾಜೀನಾಮೆ ನೀಡಲಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ...

Widgets Magazine