ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆಗೆ ಸ್ಕೇಚ್ ಹಾಕಿದ ಪತ್ನಿ ಅರೆಸ್ಟ್

ಬೆಂಗಳೂರು, ಬುಧವಾರ, 13 ಸೆಪ್ಟಂಬರ್ 2017 (19:05 IST)

ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆಗೆ ಸ್ಕೇಚ್ ಹಾಕಿದ ಪತ್ನಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪ್ರಿಯಕರ ಆನಂದ್‌ನೊಂದಿಗಿನ ಸಂಬಂಧದ ಬಗ್ಗೆ ಪತಿ ಪ್ರಸನ್ನಕುಮಾರ್ ಪ್ರಶ್ನಿಸಿದ್ದರಿಂದ ಕುಪಿತಗೊಂಡ ಪತ್ನಿ ಶೈಲಜಾ, ಆತನ ಹತ್ಯೆಗೆ ಸ್ಕೇಚ್ ಹಾಕಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪ್ರಿಯಕರನೊಂದಿಗಿನ ಅನೈತಿಕ ಸಂಬಂಧವನ್ನು ಪತಿ ಪೋಷಕರಿಗೆ, ಸಂಬಂಧಿಕರಿಗೆ ತಿಳಿಸಿದಲ್ಲಿ ಮಾನ ಮರ್ಯಾದೆ ಹೋಗುತ್ತದೆ ಎಂದು ಭಾವಿಸಿದ ಪತ್ನಿ, ಪತಿಯ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾಳೆ. 
 
ಪ್ರಿಯಕರ ಆನಂದ್‌ ಜೊತೆ ಸೇರಿ ಪತಿ ಪ್ರಸನ್ನಕುಮಾರ್‌ಗೆ ನಿದ್ರೆಮಾತ್ರೆ ನೀಡಿ ಹತ್ಯೆಗೈಯಲು ಪತ್ನಿ ಸಂಚು ರೂಪಿಸಿದ್ದಳು. ಆದರೆ, ಸಂಚು ವಿಫಲವಾದಾಗ ಬೇರೆ ರೀತಿ ಹತ್ಯೆ ಮಾಡಲು ಸಂಚು ರೂಪಿಸಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಪತ್ನಿಯ ಸಂಚು ತಿಳಿದ ಪತಿ ಪ್ರಸನ್ನಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾತೆ ಮಹಾದೇವಿ ಹೇಳಿಕೆಗೆ ಪ್ರತಿಕ್ರಿಯೆ ನೀಡೋಲ್ಲ: ಯಡಿಯೂರಪ್ಪ

ವಿಜಯಪುರ: ಸಿದ್ದಗಂಗಾಶ್ರೀ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮಾತೆ ಮಹಾದೇವಿ ಹೇಳಿಕೆ ಸಂಬಂಧ ಯಾವುದೇ ...

news

`ಭಾರತರತ್ನ’ಕ್ಕಾಗಿ ಶ್ರೀಗಳು ಮಾತು ಬದಲಿಸಿದ್ದಾರೆ: ಮಾತೆ ಮಹಾದೇವಿ

ಬಾಗಲಕೋಟೆ: ಸಿದ್ದಗಂಗಾ ಶ್ರೀಗಳು `ಭಾರತರತ್ನ’ಕ್ಕಾಗಿ ಮಾತು ಬದಲಿಸಬಾರದು ಎಂದು ಶ್ರೀಗಳ ವಿರುದ್ಧ ಬಸವಧರ್ಮ ...

news

ಗೌರಿ ಲಂಕೇಶ್ ಸಹೋದರ ಇಂದ್ರಜಿತ್‌ನನ್ನು ತನಿಖೆಗೊಳಪಡಿಸಿದ ಎಸ್‌ಐಟಿ

ಬೆಂಗಳೂರು: ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ...

news

ಪ್ರಧಾನಿ ಮೋದಿ-ಜಪಾನ್ ಪಿಎಂ ಶಿಂಜೋ ಅಬೆ ರೋಡ್ ಶೋ

ಅಹಮದಾಬಾದ್‌‌: ಭಾರತ ಪ್ರವಾಸಕ್ಕಾಗಿ ಆಗಮಿಸಿರುವ ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆಯವರನ್ನು ಪ್ರಧಾನಮಂತ್ರಿ ...

Widgets Magazine