ಬೆಂಗಳೂರು- ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಈ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಮಗಳು. ರಕ್ತದಲ್ಲೇ ರಾಜಕಾರಣವಿಟ್ಟುಕೊಂಡು ಬಂದ ಅವರು ಈಗಲೂ ದೊಡ್ಮನೆಯ ಏಕೈಕ ರಾಜಕಾರಣಿ. ಜೆಡಿಎಸ್ ಪಕ್ಷದಲ್ಲಿದ್ದ ಅವರು ಈಗ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇನ್ನೇನು ಲೋಕಸಭ ಚುನಾವಣೆ ಹತ್ತಿರ ಬರುತ್ತಿದ್ದು, ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಂಭವವಿದೆ. ಇದಕ್ಕೆ ಶಿವಣ್ಣ ಕೂಡ ಸುಳಿವು ನೀಡಿದ್ದಾರೆ.ಕಾಂಗ್ರೆಸ್ ಪಕ್ಷದ ಪರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಹಿರಂಗವಾಗಿ ಟಿಕೆಟ್ ನೀಡುವುದಾಗಿ ಘೋಷಿಸಿದರೂ ಕೂಡ ಅದನ್ನು ನಯವಾಗಿಯೇ ನಿರಾಕರಿಸಿದವರು ಶಿವಣ್ಣ.