ಸೋಲುತ್ತೇವೆಂದು ಚುನಾವಣೆಯಲ್ಲಿ ಸ್ಪರ್ಧಿಸದಿರಲು ಆಗುತ್ತಾ: ಮಲ್ಲಿಕಾರ್ಜುನ್ ಖರ್ಗೆ

ಬೆಂಗಳೂರು, ಗುರುವಾರ, 20 ಜುಲೈ 2017 (18:45 IST)

Widgets Magazine

ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಮೀರಾಕುಮಾರ್ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಸ್ಪರ್ಧಿಸದಿರಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
 
ನೂತನ ರಾಷ್ಟ್ರಪತಿಯಾಗಿ ರಾಮಾನಾಥ್ ಕೋವಿಂದ್ ಆಯ್ಕೆಯಾದ ನಂತರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು, ಸೋಲು ಖಚಿತವೆಂದು ಚುನಾವಣೆಯಿಂದ ದೂರವಿರಲು ಸಾಧ್ಯವೇ? ಪ್ರಜಾಪ್ರಭುತ್ವದಲ್ಲಿ ಸ್ಪರ್ಧೆ ಅಗತ್ಯ ಎಂದು ಪ್ರತಿಪಾದಿಸಿದರು.
 
ಯುಪಿಎ ಅಭ್ಯರ್ಥಿ ಮೀರಾಕುಮಾರ್ ಮೊದಲೇ ಹೇಳಿದಂತೆ ಇದು ನನ್ನ ಕೋವಿಂದ್ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ. ಸೈದ್ದಾಂತಿಕ ವಿಚಾರಗಳ ನಡೆಯುತ್ತಿರುವ ಚುನಾವಣೆ ಎಂದಿದ್ದನ್ನು ಸ್ಮರಿಸಿದರು.
 
ಹಿಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಂತೆ ರಾಮಾನಾಥ್ ಕೋವಿಂದ್ ಕಾರ್ಯನಿರ್ವಹಿಸಲಿ. ಅವರ ಗೆಲುವಿಗೆ ಕಾಂಗ್ರೆಸ್ ಪಕ್ಷ ಶುಭ ಹಾರೈಸುತ್ತದೆ ಎಂದು ತಿಳಿಸಿದ್ದಾರೆ.
 
ತತ್ವ ಸಿದ್ದಾಂತಗಳ ಮೇಲೆ ನಡೆದ ಚುನಾವಣೆಯಲ್ಲಿ ಹಿನ್ನೆಡೆಯಾಗಿ ಮೀರಾಕುಮಾರ್ ಪರಾಭವಗೊಂಡಿದ್ದಾರೆ. ಸೋಲಿನ ನಂತರ ಚರ್ಚೆ ಮಾಡುವುದರಲ್ಲಿ ಅರ್ಥವೇ ಇಲ್ಲ. ಸೋಲುತ್ತೇವೆ ಎಂದು ಎಲ್ಲಾ ಚುನಾವಣೆಗಳನ್ನು ಬಿಜೆಪಿಗೆ ಬಿಟ್ಟುಕೊಡು ಆಗುತ್ತಾ ಎಂದು  ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮಲ್ಲಿಕಾರ್ಜುನ್ ಖರ್ಗೆ ರಾಷ್ಟ್ರಪತಿ ಚುನಾವಣೆ ರಾಮಾನಾಥ್ ಕೋವಿಂದ್ ಕಾಂಗ್ರೆಸ್ Congress Presidential Election Ramanath Kovinda Mallikarjun Kharge

Widgets Magazine

ಸುದ್ದಿಗಳು

news

ತಿಮ್ಮಪ್ಪನ ದರ್ಶನ ಪಡೆದ ಕ್ರಿಕೆಟ್ ದೇವರು

ಮಾಸ್ಟರ್ ಬ್ಲಾಸ್ಟರ್ ಸಚಿನ ತೆಂಡೂಲ್ಕರ್ ಅವರು ಪತ್ನಿ ಸಮೇತರಾಗಿ ತಿರುಪತಿಗೆ ತೆರಳಿದ್ದು, ತಿಮ್ಮಪ್ಪನ ...

news

ಶಶಿಕಲಾ ಭೇಟಿಗೆ ಟಿಟಿವಿ ದಿನಕರನ್‌ಗೆ ಅವಕಾಶ ನಕಾರ

ಬೆಂಗಳೂರು: ತಮಿಳುನಾಡಿನ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರನ್ನು ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ...

news

ನೂತನ ರಾಷ್ಟ್ರಪತಿಗೆ ಪ್ರಧಾನಿ ಅಭಿನಂದನೆ

ದೇಶದ 14ನೇ ರಾಷ್ಟ್ರಪತಿಯಾಗಿ ಎನ್ ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಆಯ್ಕೆಯಾಗಿದ್ದು, ಪ್ರಧಾನಿ ನರೇಂದ್ರ ...

news

102 ಐಫೋನ್`ಗಳೊಂದಿಗೆ ಸಿಕ್ಕಿಬಿದ್ದ ಮಹಿಳೆ..!

ಐಫೋನ್ ಇಟ್ಟುಕೊಳ್ಳುವುದು ಬಹುತೇಕ ಜನರಿಗೆ ಈಗ ಪ್ರತಿಷ್ಠೆಯ ವಿಷಯ. ಅಂತಹ ಐಫೋನ್`ಗಾಗಿ ಏನೆಲ್ಲ ಮಾಡಿರುವವರ ...

Widgets Magazine