ಅನ್ನಭಾಗ್ಯ ಕಡಿತ: ಶಾಸಕರನ್ನು ತರಾಟೆಗೆ ತೆಗೆದುಕೊಂಡ ಮಹಿಳೆ

ಚಿಕ್ಕಮಗಳೂರು, ಭಾನುವಾರ, 8 ಜುಲೈ 2018 (17:55 IST)


ರೈತರ ಸಾಲಮನ್ನಾಕ್ಕೆ‌ ಪಡಿತರ‌ ಕಡಿತಗೊಳಿಸಿದ್ದಕ್ಕೆ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರು ಶಾಸಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆ ಪಟ್ಟಣದ ನಡು ರಸ್ತೆಯಲ್ಲಿಯೇ ಶಾಸಕರಿಗೆ ತರಾಟೆ ತಗೆದುಕೊಂಡ ಮಹಿಳೆ ಗಮನ ಸೆಳೆದಿದ್ದಾಳೆ. 
ಮೂಡಿಗೆರೆ ಎಂ ಪಿ ಕುಮಾರಸ್ವಾಮಿಗೆ ತರಾಟೆಗೆ ತಗೆದುಕೊಂಡ ತೆಗೆದುಕೊಂಡ ಮಹಿಳೆ ಸುಬ್ಬಮ್ಮ.
 
ಅನ್ಮಭಾಗ್ಯದ ಅಕ್ಕಿ‌ ಕಸಿದುಕೊಂಡು ಬಡವರ ಹೊಟ್ಟೆ ಮೇಲೆ‌ ಏಕೆ‌ ಹೊಡೆಯುತ್ತಿದ್ದೀರಿ ಎಂದು ಶಾಸಕರಿಗೆ  ಸುಬ್ಬಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರೇ ನೀವೂ ಹಿಂದೆ ಬಡವರಾಗಿದ್ರಿ ಎಂಬುದನ್ನು‌ ಮರೆಯಬೇಡಿ ಎಂದ‌ ಮಹಿಳೆ ಶಾಸಕರಿಗೆ ಹೇಳಿದ್ದಾಳೆ. 
ಹೀಗಾದ್ರೆ ಮಕ್ಕಳನ್ನು ಸಾಕುವುದು ಹೇಗೆ ಎಂದು‌‌ ಶಾಸಕರಿಗೆ ಪ್ರಶ್ನಿಸಿದ‌ ಮಹಿಳೆ ತಮ್ಮ ಗೋಳು ತೋಡಿಕೊಂಡಿದ್ದಾಳೆ.
 
ಮಹಿಳೆ ಸಮಾಧಾನ‌ಪಡಿಸಲು ಶಾಸಕ ಎಂ ಪಿ ಕುಮಾರಸ್ವಾಮಿ ಹರ ಸಾಹಸ ಪಟ್ಟರು. ಸದನದಲ್ಲಿ‌ ಈ ಬಗ್ಗೆ ಪ್ರಸ್ತಾಪ‌ ಮಾಡ್ತೇನೆ ಎಂದು ಮಹಿಳೆಗೆ ಎಂ‌ ಪಿ ಕುಮಾರಸ್ವಾಮಿ ಭರವಸೆ ನೀಡಿದರು. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಮ್ಮಿಶ್ರ ಸರಕಾರದಲ್ಲಿ ನೆಲಬಾಂಬ್ ಗಳಿವೆ ಎಂದ ಬಿಜೆಪಿ ಶಾಸಕ!

ಸಮ್ಮಿಶ್ರ ಸರ್ಕಾರದಲ್ಲಿ ನೆಲಬಾಂಬ್ ಗಳಿವೆ. ಲೋಕ ಚುನಾವಣೆಗೂ ಮುನ್ನವೇ ಈ ನೆಲ ಬಾಂಬ್ ಗಳು ಸ್ಪೋಟಗೊಳ್ಳಲಿವೆ ...

news

ದೇವಸ್ಥಾನ ಉದ್ಘಾಟನೆ ವಿಚಾರ: ಹಾಲಿ- ಮಾಜಿ ಶಾಸಕ ಕಿತ್ತಾಟ

ಹಠಕ್ಕೆ ಬಿದ್ದ ರಾಜಕಾರಣಿಗಳಿಂದ ಉದ್ಘಾಟನೆಯಾದ ದೇವಸ್ಥಾನಕ್ಕೆ ಮತ್ತೊಮ್ಮೆ ಉದ್ಘಾಟನೆ ಭಾಗ್ಯ ಸಿಕ್ಕಿದೆ. ...

news

ಅಂದು ಶಾಲೆಗೆ ಬೆಂಕಿ ಇಟ್ಟಿದ್ದ ಪಾಗಲ್ ಪ್ರೇಮಿ ಈಗ ಮಾಡಿದ್ದೇನು ಗೊತ್ತಾ?

ಅಂದು ಶಾಲೆಗೆ ಬೆಂಕಿ ಇಟ್ಟಿದ್ದ ಪಾಗಲ್ ಪ್ರೇಮಿಯ ಅಟ್ಟಹಾಸ ಮುಂದುವರೆದಿದೆ. ಈ ಹಿಂದೆ ಶಾಲೆಗೆ ಬೆಂಕಿ ...

news

ಯಾವುದೇ ಕ್ಷಣ ಸಮ್ಮಿಶ್ರ ಸರಕಾರ ಪತನ: ಡಿವಿಎಸ್

ಯಾವುದೇ ಕ್ಷಣದಲ್ಲಿ ಸಮ್ಮಿಶ್ರ ಸರಕಾರ ಪತನ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ...

Widgets Magazine
Widgets Magazine