ಅಮೆಜಾನ್`ಗೆ 70 ಲಕ್ಷ ರೂ. ನಾಮ ಹಾಕಿದ್ದ ಮಹಿಳೆ ಅರೆಸ್ಟ್..!

ಬೆಂಗಳೂರು, ಬುಧವಾರ, 10 ಮೇ 2017 (13:28 IST)

Widgets Magazine

ಪ್ರತಿಷ್ಠಿತ ಆನ್ ಲೈನ್ ಶಾಪಿಂಗ್ ಸಂಸ್ಥೆ ಅಮೇಜಾನ್`ಗೆ 70 ಲಕ್ಷ ರೂ. ನಾಮ ಹಾಕಿದ್ದ 32 ವರ್ಷದ ಮಹಿಳೆಯನ್ನ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಂಧಿತ ಮಹಿಳೆಯನ್ನ ಪಶ್ಚಿಮ ಬಂಗಾಳ ಮೂಲದ ಇಂಜಿನಿಯರಿಂಗ್ ಪದವಿಧರೆ ದೀಪನ್ವಿತಾ ಘೋಷ್ ಎಂದು ಗುರ್ತಿಸಲಾಗಿದೆ.
 


ಅಮೆಜಾನ್`ನಲ್ಲಿ 69.91 ಲಕ್ಷದಷ್ಟು ವಸ್ತುಗಳನ್ನ ಖರೀದಿಸಿದ್ದ ಮಹಿಳೆ ಬಳಿಕ ಅದೇ ವಸ್ತುಗಳನ್ನ ಹೋಲುವ ಕಡಿಮೆ ಬೆಲೆಯ ನಕಲಿ ವಸ್ತುಗಳನ್ನ ಬೇರೊಂದು ವೆಬ್ ಸೈಟ್ ಮೂಲಕ ಖರೀದಿಸಿದ್ದಳು. ಬಳಿಕ ನಿಮ್ಮ ವಸ್ತುಗಳು ಸರಿ ಇಲ್ಲ ಎಂದು ಅಮೆಜಾನ್`ಗೆ ನಕಲಿ ವಸ್ತುಗಳನ್ನ ಹಿಂದಿರುಗಿಸಿ ಲಕ್ಷ ಲಕ್ಷ ನಾಮ ಹಾಕಿದ್ದಳು ಎಂದು ಆರೋಪ ಕೇಳಿಬಂದಿದೆ.
 
ಪ್ರೊಫೆಶನಲ್ ಸರ್ವಿಸಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಈ ಮಹಿಳೆ ಹೊರಮಾವುವಿನ ಅಗರದಲ್ಲಿ ಪತಿ ಜೊತೆ ವಾಸವಿದ್ದಳು. ಏಪ್ರಿಲ್ 18ರಂದು ವಂಚನೆ ಕುರಿತಂತೆ ಅಮೇಜಾನ್ ಪ್ರತಿನಿಧಿ ಡೆನು ಟಿ ನಾಯರ್ ಹೆಣ್ಣೂರ ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ನಕಲಿ ಹೆಸರುಗಳನ್ನ ಬಳಸಿ 104 ವಸ್ತುಗಳನ್ನ ಖರೀದಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬೆಳ್ಳಂ ಬೆಳಗ್ಗೆ ಎಸಿಬಿ ಶಾಕ್: 4 ಅಧಿಕಾರಿಗಳ ಮನೆ ಮೇಲೆ ದಾಳಿ

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಎಸಿಬಿ ...

news

ಜಮ್ಮುವಿನಲ್ಲಿ ಸೇನಾಧಿಕಾರಿಯನ್ನ ಅಪಹರಿಸಿ ಹತ್ಯೆಗೈದ ಉಗ್ರರು

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಉಗ್ರರು ಸೇನಾಧಿಕಾರಿಯನ್ನ ಅಪಹರಿಸಿ ...

news

ಖರ್ಗೆ ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ನನಗೆ ತಿಳಿದಿಲ್ಲ: ಪರರಮೇಶ್ವರ್

ನನ್ನನ್ನ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಸುವ ಬಗ್ಗೆ ಚರ್ಚೆ ನಡೆದಿದೆ. ಹೊಸಬರನ್ನ ತರುವ ಕುರಿತಂತೆಯೂ ...

news

ಹೈದ್ರಾಬಾದ್`ನಲ್ಲಿ ಭೀಕರ ಅಪಘಾತ: ಸಚಿವರ ಪುತ್ರ ಸೇರಿ ಇಬ್ಬರ ಸಾವು

ಹೈದ್ರಾಬಾದ್`ನಲ್ಲಿ ಬೆಳ್ಳಂ ಬೆಳಗ್ಗೆ ನಡೆದ ಅಪಘಾತದಲ್ಲಿ ಆಂಧ್ರಪ್ರದೇಶದ ಹಿರಿಯ ಸಚಿವರೊಬ್ಬರ ಪುತ್ರ ...

Widgets Magazine