6-7 ತಿಂಗಳ ಬಳಿಕ ಸಿದ್ದರಾಮಯ್ಯನನ್ನ ಸೆಂಟ್ರಲ್ ಜೈಲಿನಲ್ಲಿಡುತ್ತೇವೆ: ಯಡಿಯೂರಪ್ಪ

ಬೆಂಗಳೂರು, ಶುಕ್ರವಾರ, 18 ಆಗಸ್ಟ್ 2017 (13:23 IST)

Widgets Magazine

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಹೋರಾಟ ನಡೆಸುತ್ತಿದೆ. ಮಾಜಿ ಸಿಎಂ ನೇತೃತ್ವದಲ್ಲಿ ಫ್ರೀಡಂ ಪಾರ್ಕ್`ನಲ್ಲಿ ಹೋರಾಟದಲ್ಲಿ ತೊಡಗಿದ್ಧಾರೆ. ಈ ಸಂದರ್ಭ ಯಡಿಯೂರಪ್ಪ, ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ನಮ್ಮ ಮೇಲೆ ಎಸಿಬಿಯಲ್ಲಿ ಇಲ್ಲಸಲ್ಲದ ಕೇಸ್ ದಾಖಲಿಸುವ ಮೂಲಕ ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದೀರಿ, ಆದರೆ, ಅದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಶೋಭಾ ಕರಂದ್ಲಾಜೆ, ಅಶೋಕ್, ನನ್ನ ಹೆಸರನ್ನ ಹೇಳಿ ಬೆದರಿಸುವ ಯತ್ನ ಮಾಡುತ್ತಿದ್ದೀರಿ. ಇನ್ನೂ 6-7 ತಿಂಗಳು ನಿಮ್ಮ ಅಧಿಕಾರ ಇರುತ್ತೆ. ಇದಾದ ಬಳಿಕ ನಿಮ್ಮನ್ನ ಸೆಂಟ್ರಲ್ ಜೈಲಿನಲ್ಲಿಡುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
 ಇದೇವೇಳೆ, ಕೇಂದ್ರದ ಅನುದಾನದ ಹಣದ ಲೆಕ್ಕ ಕೇಳಲು ನೀವ್ಯಾರು ಎಂದು ಸಿಎಂ ಸಿದ್ದರಾಮಯ್ಯ, ಅಮಿತ್ ಶಾ ವಿರುದ್ಧ ಮಾಡಿದ್ದ ಟೀಕೆ ಬಗ್ಗೆ ಕಿಡಿ ಕಾರಿದ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯನವರೇ ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆಗೂ ಲೆಕ್ಕ ಕೇಳುವ ಅಧಿಕಾರ ಇದೆ ಎಂದು ಹೇಳಿದ್ದಾರೆ.  ಸಚಿವರಾದ ಡಿ.ಕೆ. ಶಿವಕುಮಾರ್, ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಿಸಬೇಕೆಂಬುದು ಈ ಹೋರಾಟದ ಉದ್ದೇಶ. ಅವರ ರಾಜೀನಾಮೆ ಪಡೆದರೆ ನನ್ನ ಬುಡಕ್ಕೇ ಬರುತ್ತೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜೆಡಿಎಸ್ ಬಂಡಾಯ ಶಾಸಕರು ಬೇಷರತ್ತಾಗಿ ಕಾಂಗ್ರೆಸ್‌ಗೆ ಸೇರ್ಪಡೆ: ಪರಮೇಶ್ವರ್

ಆಲಮಟ್ಟಿ: ಜೆಡಿಎಸ್ ಪಕ್ಷದ ಏಳು ಬಂಡಾಯ ಶಾಸಕರು ಬೇಷರತ್ತಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ...

news

ಕಳ್ಳರ ಕಳ್ಳ ಸಿಎಂ ಸಿದ್ದರಾಮಯ್ಯ: ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಾಕಷ್ಟು ಕಳ್ಳಬೆಕ್ಕುಗಳಿವೆ. ಕಳ್ಳರ ಕಳ್ಳ ...

news

ನನ್ನ ಮೇಲೆ ಯುದ್ಧ ಮಾಡುವವರ ವಿರುದ್ಧ ಯುದ್ಧಕ್ಕೆ ಸಿದ್ದ : ಡಿ.ಕೆ.ಶಿವಕುಮಾರ್

ಬೆಂಗಳೂರು: ನನ್ನ ಮೇಲೆ ಯುದ್ಧ ಮಾಡುವವರ ವಿರುದ್ಧ ಯುದ್ಧಕ್ಕೆ ಸಿದ್ದವಾಗಿದ್ದೇನೆ ಎಂದು ಇಂಧನ ಖಾತೆ ಸಚಿವ ...

news

ಹರತಾಳು ಹಾಲಪ್ಪ ನಿರ್ದೋಷಿಯಾಗಿದ್ದರೂ ಬಿಜೆಪಿಗೆ ಇಕ್ಕಟ್ಟು

ಬಿಜೆಪಿಯ ಮಾಜಿ ಸಚಿವ ಹರತಾಳು ಹಾಲಪ್ಪ ನಿರ್ದೋಷಿಯಾಗಿ ಹೊರ ಬಂದಿದ್ದಾರೆ. ಅತ್ಯಾಚಾರ ಆರೋಪ ಪ್ರಕರಣದಿಂದ ...

Widgets Magazine