ಅರಮನೆಯಲ್ಲಿ ಯದುವೀರ್ ಒಡೆಯರ್ ರಿಂದ ಸರಸ್ವತಿ ಪೂಜೆ

ಮೈಸೂರು, ಗುರುವಾರ, 28 ಸೆಪ್ಟಂಬರ್ 2017 (12:41 IST)

ಮೈಸೂರು: ನವರಾತ್ರಿಯ 7ನೇ ದಿನವಾದ ನಿನ್ನೆ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಮೈಸೂರು ಮಹಾ ಸಂಸ್ಥಾನದ ವಿದ್ಯಾದೇವಿ ಸರಸ್ವತಿಗೆ ಅಗ್ರ ಪೂಜೆ ಸಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿಗೆ ಪೂಜೆ ಸಲ್ಲಿಸಿದರು.


ಆಯುಧ ಪೂಜೆಗೂ ಮುನ್ನವೇ ಮೈಸೂರು ಅಂಬಾವಿಲಾಸ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಮಹಾರಾಜರಿಂದ ಸರಸ್ವತಿ ಪೂಜೆ ನೆರವೇರುತ್ತೆ. ಈ ವೇಳೆ ಶ್ರೀ ದುರ್ಗೆ, ವಾಗ್ದೇವಿ, ವೀಣಾಪಾಣಿ, ಪುಸ್ತಕ ದಾರಿ, ಮಹಾಲಕ್ಷ್ಮಿ, ಮಹಾ ಸರಸ್ವತಿಯ ಅಗ್ರಪೂಜೆ ನವರಾತ್ರಿಯಲ್ಲಿ ಮಹಾರಾಜರು ನೆರವೇರಿಸುವುದು ವಿಶೇಷ.

ಸರಸ್ವತಿ ಪೂಜಾ ಕೈಂಕರ್ಯದಲ್ಲಿ ಮೈಸೂರು ಅರಸರ ಕುಲದೇವತೆ ಚಾಮುಂಡೇಶ್ವರಿ ದೇವಿ, ವಿಘ್ನ ನಿವಾರಕ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸರಸ್ವತಿ ಪೂಜೆ ಅಂಗವಾಗಿ ಸರಸ್ವತಿಯ ಭಾವಚಿತ್ರದ ಜತೆಗೆ ಅರಮನೆಯಲ್ಲಿರುವ ವೀಣೆಗಳು, ಪುರಾತನ ಕಾಲದ ಗ್ರಂಥ, ಹಸ್ತಪ್ರತಿಗಳಿಗೆ ಯದುವೀರ್‌ ಒಡೆಯರ್ ಅವರು ಪೂಜೆ ಸಲ್ಲಿಸಿದರು. ಬಳಿಕ, ಅಲಪೀಠ ಪೂಜೆ, ದ್ವಾರಪಾಲಕ ಪೂಜೆ, ಮಂಟಪ ಪೂಜೆಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಈ ವೇಳೆ ರಾಜಪುರೋಹಿತರು, ಅರಮನೆ ಪಂಡಿತರು ವೇದ, ಮಂತ್ರಘೋಷ ಹೇಳುವ ಮೂಲಕ ಶಾರದಾಂಬೆಯನ್ನು ಸ್ತುತಿಸಿದರು.ಇದರಲ್ಲಿ ಇನ್ನಷ್ಟು ಓದಿ :  
ಮೈಸೂರು ದಸರಾ ಸರಸ್ವತಿ ಪೂಜಾ ಯದುವೀರ್ ಒಡೆಯರ್ Yaduveer Wadiyar Saraswathi Pooja Mysore Dasara

ಸುದ್ದಿಗಳು

news

ಪೊಲೀಸ್ ಠಾಣೆಗೆ ಹಾಜರಾಗಲ್ಲ, ಬೇಕಿದ್ರೆ ನೀವೇ ಮನೆಗೆ ಬನ್ನಿ: ಎಸಿಪಿಗೆ ಬಿಎಸ್‌ವೈ ಪತ್ರ

ಬೆಂಗಳೂರು: ವಿಧಾನಪರಿಷತ್ ಸದಸ್ಯ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣಕ್ಕೆ ...

news

ಭಾರತೀಯ ಸೇನೆಯ ಆಪರೇಷನ್ ಅರ್ಜುನ್ ಗೆ ಪಾಕ್ ಗಡ ಗಡ

ನವದೆಹಲಿ: ಗಡಿಯಲ್ಲಿ ಗಡಿ ನಿಯಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಪಾಕ್ ಗೆ ತಕ್ಕ ಪಾಠ ಕಲಿಸಲು ಭಾರತ ...

news

ಭಾರತೀಯ ಸೇನೆ ಎರಡನೇ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ನಿಜವೇ?

ನವದೆಹಲಿ: ಭಾರತೀಯ ಸೇನೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ...

news

ಸರಿಯಾದ ಟೈಂಗೆ ಬಸ್ ಇಲ್ಲ ಎಂದ ವಿದ್ಯಾರ್ಥಿಗೆ ಬಿತ್ತು ಗೂಸಾ

ಹುಬ್ಬಳ್ಳಿ: ಬಸ್ ಸರಿಯಾದ ಸಮಯಕ್ಕೆ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಸಾರಿಗೆ ಇಲಾಖೆ ನಿಯಂತ್ರಕ ...

Widgets Magazine
Widgets Magazine