ನೋಟ್ ಬ್ಯಾನ್ ಗೆ ವರ್ಷ ಹಿನ್ನೆಲೆ: ಕೆಪಿಸಿಸಿಯಿಂದ ನಾಳೆ ಕರಾಳ ದಿನಾಚರಣೆ

ಬೆಂಗಳೂರು, ಮಂಗಳವಾರ, 7 ನವೆಂಬರ್ 2017 (15:44 IST)

ಬೆಂಗಳೂರು: ನೋಟ್ ಬ್ಯಾನ್ ಆಗಿ ಒಂದು ವರ್ಷ ಕಳೆದಿದ್ದು, ಇದ್ರಿಂದ ಸಾಮಾನ್ಯ ಜನರು, ರೈತರು, ಎಲ್ಲರೂ ನಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ನಾಳೆ ಕರಾಳ ದಿನಾಚರಣೆ ಆಚರಿಸಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.


ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಪ್ರಧಾನಿ ಕಳೆದ ವರ್ಷ ನೋಟ್ ಬ್ಯಾನ್ ಮಾಡಿ ಏಕಾಏಕಿ ತೀರ್ಮಾನ ಕೈಗೊಂಡ್ರು. ಆ ನಷ್ಟವನ್ನು ಭರಿಸುವ ಶಕ್ತಿ ಮೋದಿಗೆ ಇದೆಯಾ. ಅವರು ಹೇಳಿದ್ದೂ ಯಾವುದೂ ಆಗಿಲ್ಲ, ಬರೀ ಸುಳ್ಳು ಹೇಳಿದ್ದಾರೆ. ಬಿಜೆಪಿ ನಾಳೆ ನೋಟ್ ಬ್ಯಾನ್ ಮಾಡಿದ್ದನ್ನು ಸೆಲಬ್ರೇಟ್ ಮಾಡಲು ಮುಂದಾಗಿದೆ. ವಿಶ್ವವೇ ಹೇಳ್ತಿದೆ ಮೋದಿ ನಿರ್ಧಾರ ಮೂರ್ಖತನದ ಪರಮಾವಾಧಿ ಎಂದು. ದೇಶದ ಇತಿಹಾಸದಲ್ಲಿ ಇದು ಕೆಟ್ಟ ಆರ್ಥಿಕ ತೀರ್ಮಾನ ಎಂದರು.

ಬಿಜೆಪಿ ನೋಟ್ ಬ್ಯಾನ್ ವಿಜೃಂಭಣೆಯಿಂದ ಆಚರಿಸಲು ಹೊರಟಿರೋದು ಉದ್ಧಟತನ. ನಾಳೆ ಕೆಪಿಸಿಸಿಯಿಂದ ಮೌರ್ಯ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ಮಾಡ್ತೇವೆ. ಪ್ರಾಣಕಳೆದು ಕೊಂಡವರಿಗೆ ನಮನ ಸಲ್ಲಿಸ್ತೀವಿ. ನಾಳೆ ಸಂಜೆ ಬ್ರಿಗೇಡ್ ರಸ್ತೆಯ ವಾರ್ ಮೆಮೋರಿಯಲ್ ಬಳಿ ನಮನ ಸಲ್ಲಿಸಲಿದ್ದೇವೆ ಎಂದರು.

ವಿ.ಎಸ್.ಉಗ್ರಪ್ಪ ಮಾತನಾಡಿ, ದೇಶದ ಎಕಾನಮಿ ಇತಿಹಾಸದಲ್ಲಿ ಕರಾಳ ರಾತ್ರಿ ಇದ್ರೆ ಅದು 8 ನವೆಂಬರ್ 2017.  ಪ್ರಧಾನಿ ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾ ಆಕ್ಟ್ ಗೆ ವಿರುದ್ಧವಾಗಿ ಸರ್ವಾಧಿಕಾರಿ ರೀತಿಯಲ್ಲಿ ನೋಟ್ ಬ್ಯಾನ್ ಮಾಡಿದ್ದಾರೆ. ದೇಶದ ಆರ್ಥಿಕತೆ ಮೇಲೆ ಮೋದಿ ಚಪ್ಪಡಿ ಎಳೆದಿದ್ದಾರೆ ಎಂದರು.ಇದರಲ್ಲಿ ಇನ್ನಷ್ಟು ಓದಿ :  
ನೋಟ್ ಬ್ಯಾನ್ ಕರಾಳ ದಿನ ಕೆಪಿಸಿಸಿ ದಿನೇಶ್ ಗುಂಡೂರಾವ್ Demonitisation Kpcc Dark Day Note Ban

ಸುದ್ದಿಗಳು

news

ಜನಾರ್ದನ ರೆಡ್ಡಿ ಜಾಮೀನು ರದ್ದಿಗೆ ಎಸ್‌‍ಐಟಿ ಮನವಿ

ನವದೆಹಲಿ: ಅಕ್ರಮ ಗಣಿಗಾರಿಕೆ ಅವ್ಯವಹಾರದಲ್ಲಿ ಆರೋಪಿಯಾಗಿರುವ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ...

news

ವಿವಾಹಿತ ಮಹಿಳೆಯ ಮೇಲೆ ಗ್ಯಾಂಗ್‌ರೇಪ್: ಆರೋಪಿ ಅರೆಸ್ಟ್

ಮುಂಬೈ: ವಿವಾಹಿತ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಆರೋಪಿ ಅನಿಲ್ ವಸಂತ ತೊಂಬ್ರೆಯನ್ನು ಪೊಲೀಸರು ...

news

ಟೆಕ್ ಪಾರ್ಕ್ ಸುತ್ತ ಟ್ರಾಫಿಕ್ ಕಿರಿಕಿರಿ: ಗೃಹಸಚಿವರಿಗೆ ಶಿವಣ್ಣ ದಂಪತಿ ದೂರು

ಬೆಂಗಳೂರು: ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಇಂದು ಗೃಹಸಚಿವ ರಾಮಲಿಂಗಾರೆಡ್ಡಿಯವರನ್ನ ಭೇಟಿಯಾಗಿ ...

news

ಪರಿವರ್ತನೆ ಯಾತ್ರೆ ವೈಫಲ್ಯ: ವರದಿ ಸಲ್ಲಿಕೆಗೆ ಜಾವ್ಡೇಕರ್‌ಗೆ ಹೊಣೆ

ಬೆಂಗಳೂರು: ಬಿಜೆಪಿ ಪರಿವರ್ತನೆ ಯಾತ್ರೆಯ ವೈಫಲ್ಯದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಬಿಜೆಪಿ ...

Widgets Magazine