ಬಿಜೆಪಿ ಭಿನ್ನಮತ- ಇರಿಸು ಮುರಿಸು ಅನುಭವಿಸಿದ ಯಡಿಯೂರಪ್ಪ

ಬೀದರ್, ಗುರುವಾರ, 7 ಡಿಸೆಂಬರ್ 2017 (18:14 IST)

ಔರಾದ್‌ ವಿಧಾನಸಭಾ ಕ್ಷೇತ್ರದಲ್ಲಿ  ಗುರುವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮತ್ತೆ ಪ್ರತಿಧ್ವನಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಅವರು ಇರಿಸು ಮುರಿಸು ಅನುಭವಿಸಿದರು.
 
ಶಾಸಕ ಪ್ರಭು ಚೌಹಾಣ್‌ ಮತ್ತು ಕಳೆದ ಬಾರಿ  ಕೆಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸೋತಿದ್ದ ಧಾನಾಜಿ ಜಾಧವ್‌ ಅವರೊಳಗಿನ ಭಿನ್ನಮತ ಸ್ಫೋಟಗೊಂಡು ಬಹಿರಂಗವಾಗಿ ವಾಗ್ವಾದ ನಡೆದು ತೀವ್ರ ಉದ್ವಿಗ್ನ ಸ್ಥಿತಿಗೆ ಕಾರಣವಾಯಿತು.
 
ಯಡಿಯೂರಪ್ಪ ಅವರು ವೇದಿಕೆಯಲ್ಲಿದ್ದಾಗಲೇ ಪರಸ್ಪರ ಧಿಕ್ಕಾರಗಳನ್ನು ಕೂಗಲಾಯಿತು. ಧಾನಾಜಿ ಅವರ ನೂರಾರು ಬೆಂಬಲಿಗರು ಆಗಮಿಸಿ  ಶಾಸಕ ಚೌಹಾಣ್‌ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಸಮಾರಂಭ ಗೊಂದಲದ ಗೂಡಾಯಿತು.
 
ಯಡಿಯೂರಪ್ಪ ಅವರು ವೇದಿಕೆಯಲ್ಲಿದ್ದಾಗಲೇ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಪಕ್ಷದಿಂದಲೆ ಹೊರ ಹಾಕುವುದಾಗಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಸಂಸದ ಭಗವಂತ್‌ ಖೂಬಾ ಅವರನ್ನು ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಹ್ಮದ್ ಪಟೇಲ್‍ರನ್ನು ಮುಖ್ಯಮಂತ್ರಿ ಮಾಡಲು ಬೆಂಬಲ ಕೋರಿದ ಪೋಸ್ಟರ್‍‍ಗಳು

ಕಾಂಗ್ರೆಸ್ ನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರನ್ನು ಗುಜರಾತ್ ...

news

ಸಲಿಂಗ ವಿವಾಹ ಕಾನೂನು ಬದ್ಧಗೊಳಿಸಿದ ಆಸ್ಟ್ರೇಲಿಯಾ

ಸಲಿಂಗ ವಿವಾಹವನ್ನು ಆಸ್ಟ್ರೇಲಿಯಾದಲ್ಲಿ ಕಾನೂನು ಬದ್ಧಗೊಳಿಸಲಾಗಿದೆ. ಕಾನೂನು ಬೆಂಬಲಿಸಿ ಸಲಿಂಗ ಪ್ರೇಮಿಗಳು ...

news

ಅತ್ಯಾಚಾರದಿಂದ ಗರ್ಭಿಣಿಯಾದ ಬುದ್ದಿಮಾಂದ್ಯ ಯುವತಿ

ಅತ್ಯಾಚಾರವೆಸಗಿದ್ದರಿಂದ ಬುದ್ಧಿಮಾಂದ್ಯ ಯವತಿಯೊಬ್ಬರು ಇದೀಗ 7 ತಿಂಗಳ ಗರ್ಭಿಣಿಯಾಗಿರುವ ಘಟನೆ ಬೆಳಕಿಗೆ ...

news

ಸಚಿವ ಜಾರ್ಜ್‍‍ನಿಂದ 850 ಕೋಟಿ ಭೂಮಿ ಕಬಳಿಕೆ!

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು 850 ಕೋಟಿ ಬೆಲೆಬಾಳುವ 13 ಎಕರೆ ಸರ್ಕಾರಿ ಸ್ವತ್ತು ...

Widgets Magazine
Widgets Magazine