ಯಡಿಯೂರಪ್ಪನವರ ಭವಿಷ್ಯ ಜೋತಿಷ್ಯದ ಮೇಲೆ ನಿಂತಿದೆ: ಸಚಿವ ಜಯಚಂದ್ರ

ತುಮಕೂರು, ಬುಧವಾರ, 21 ಡಿಸೆಂಬರ್ 2016 (17:46 IST)

ಯಡಿಯೂರಪ್ಪನವರಿಗೆ ಜ್ಯೋತಿಷ್ಯದ ಮೇಲೆ ನಂಬಿಕೆ ಇದೆ. ಬಿಜೆಪಿ ಪಕ್ಷ ಜ್ಯೋತಿಷ್ಯದ ಮೇಲೆ ನಿಂತಿದೆ ಎಂದು ಸಚಿವ ಲೇವಡಿ ಮಾಡಿದ್ದಾರೆ.
 
ತುಮಕೂರು ಜಿಲ್ಲೆಯ ಪಾವಗಡ್ ತಾಲೂಕಿನಲ್ಲಿ ಬರ ನಿರ್ವಹಣಾ ಅಧ್ಯಯನಕ್ಕೆಂದು ವಿವಿಧೆಡೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ತೀವ್ರ ಬರಗಾಲ ಸ್ಥಿತಿಯನ್ನು ಎದುರಿಸುತ್ತಿದ್ದು, ಇಂತಹ ಸಮಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
 
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ ಲೋಕಸಭೆಗೆ ಹೆಚ್ಚಾಗಿ ಬಿಜೆಪಿ ಸದಸ್ಯರನ್ನೂ ಆಯ್ಕೆ ಮಾಡಿದ್ದಾರೆ. ಆದರೆ, ರಾಜ್ಯದ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿ ಮಂತ್ರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡದಿರುವುದಕ್ಕೆ ಏನು ಹೇಳಬೇಕು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 
 
ಬರಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಅವಕಾಶ ನೀಡುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ. ನಮ್ಮ ನಂಬಿಕೆ ಹುಸಿಯಾಗಿದೆ. ಪ್ರಧಾನಿ ಲೋಕಸಭೆಗೂ ಬರುವುದಿಲ್ಲ, ಭೇಟಿಗೂ ಅವಕಾಶ ನೀಡುವುದಿಲ್ಲ ಎಂದು ಸಚಿವ ಟಿ.ಬಿ.ಜಯಚಂದ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐಟಿ, ಇಡಿ ಮೋದಿ ಅಧೀನದಲ್ಲಿರುವುದರಿಂದ ಬಿಎಸ್‌ವೈಗೆ ಮಾಹಿತಿಯಿರಬೇಕು: ಕುಮಾರಸ್ವಾಮಿ

ಸದ್ಯದಲ್ಲಿಯೇ ರಾಜ್ಯ ಸರಕಾರದ ಕೆಲವು ಸಚಿವರ ಬಣ್ಣ ಬಯಲಾಗಲಿದೆ ಎಂಬ ಬಿಎಸ್‌ವೈ ಹೇಳಿಕೆ ಕುರಿತು ...

news

ಬೆತ್ತಲೆಯಾಗಿ ಓಡಾಡಿ ಎಂದು ನಾವೇನು ಹೇಳಿದ್ವಾ: ಸಿಎಂ ಉಡಾಫೆ

ಗಿರಿಜನ ಹಾಗೂ ಆದಿವಾಸಿಗಳ ಬೆತ್ತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ...

news

ಬಾಲಕಿಯನ್ನು ಅಪಹರಿಸಿ, 5 ತಿಂಗಳು ಅತ್ಯಾಚಾರ

13 ವರ್ಷದ ಬಾಲಕಿಯನ್ನು ಅಪಹರಿಸಿ 80,000ಕ್ಕೆ ಮಾರಾಟ ಮಾಡಿ 5 ತಿಂಗಳ ಕಾಲ ಅತ್ಯಾಚಾರ ಎಸಗಿದ ಘಟನೆ ...

news

ನೋಟು ನಿಷೇಧ ಅವ್ಯವಸ್ಥೆ ಮರಳಿ ಅಧಿಕಾರಕ್ಕೆ ಬರಲು ಸಹಾಯ : ಅಖಿಲೇಶ್ ಯಾದವ್

ನೋಟು ನಿಷೇಧ ಅವ್ಯವಸ್ಥೆ ತಾವು ಮರಳಿ ಅಧಿಕಾರಕ್ಕೆ ಬರಲು ಸಹಾಯ ಮಾಡಲಿದೆ ಎಂದು ಉತ್ತರ ಪ್ರದೇಶದ ...

Widgets Magazine