ಬಿಜೆಪಿ ನಾಯಕರಿಂದಲೇ ಯಡಿಯೂರಪ್ಪ, ಶೋಭಾ ಅಶ್ಲೀಲ ಫೋಟೋಗಳ ಬಿಡುಗಡೆ?: ದೂರು ದಾಖಲು

ಮಂಗಳೂರು, ಶುಕ್ರವಾರ, 17 ನವೆಂಬರ್ 2017 (12:17 IST)

ಸಾಮಾಜಿಕ ಅಂತರ್ಜಾಲ ತಾಣವಾದ ವಾಟ್ಸಪ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರ ಅಶ್ಲೀಲ ಫೋಟೋಗಳನ್ನು ರವಾನಿಸಲಾಗಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ. 
 
ಕುಂದಾಪುರ ಮೂಲದ ಮೂವರು ಬಿಜೆಪಿ ನಾಯಕರೇ ಇಂತಹ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿ ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
 
ಬಿಜೆಪಿ ಮುಖಂಡರಾದ ರಾಜೇಶ್ ಕಾವೇರಿ, ಬಿಕಿಶೋರ್ ಕುಮಾರ್ ಮತ್ತು ರಾಜು ಪೂಜಾರಿ ಇಂತಹ ಕೃತ್ಯ ಎಸಗಿದ್ದಾರೆ ಎಂದು ಮತ್ತೊಬ್ಬ ಬಿಜೆಪಿ ನಾಯಕ ಕಾಡೂರು ಸುರೇಶ್ ಶೆಟ್ಟಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
 
ಬಿಜೆಪಿ ಕುಂದಾಪುರ ಎನ್ನುವ ವಾಟ್ಸಪ್‌ಗ್ರೂಪ್‌ನಲ್ಲಿ ಬಿಎಸ್‌ವೈ ಮತ್ತು ಕರಂದ್ಲಾಜೆ ವಿರುದ್ಧ ಅಶ್ಲೀಲ ಬರಹಗಳನ್ನು ಪೋಸ್ಟ್ ಮಾಡಿದ್ದಲ್ಲದೇ ಅಶ್ಲೀಲ ಫೋಟೋಗಳನ್ನು ಹಾಕಿ ಅವರ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಶೆಟ್ಟಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮುತಾಲಿಕ್‌ ಫೋಟೋದೊಂದಿಗೆ ಅಶ್ಲೀಲ ಫೋಟೋ: ಜೆಡಿಎಸ್ ಮುಖಂಡನ ಬಂಧನ

ಬೆಳಗಾವಿ: ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಫೋಟೋದೊಂದಿಗೆ ಅಶ್ಲೀಲ ಫೋಟೋ ಲಗತ್ತಿಸಿ ಪೋಸ್ಟ್ ...

news

ಸಿಎಂ ಸಿದ್ದರಾಮಯ್ಯಗೆ ತುರ್ತು ಕರೆ ಮಾಡಿದ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದೂ ನಾಲ್ವರು ...

news

ಸದನಕ್ಕೆ ತಲೆತೋರಿಸಿ ಕಲಾಪಕ್ಕೆ ನಾಪತ್ತೆಯಾದ ಕುಮಾರಸ್ವಾಮಿ

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನ ಆರಂಭವಾಗಿ ನಾಲ್ಕು ದಿನ ಕಳೆದರೂ ...

news

ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ತೃತೀಯ ಲಿಂಗಿಯ ಪ್ರೇಮ ನಿವೇದನೆ!

ನವದೆಹಲಿ: ತಿರುವನಂತಪುರಂನ ಸಂಸದ, ಕಾಂಗ್ರೆಸ್ ನಾಯಕ ಶಶಿ ತರೂರ್ ಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ...

Widgets Magazine
Widgets Magazine